ಮೊಹಾಲಿಯಲ್ಲಿ ಅಕಾಲಿದಳದ ವಿದ್ಯಾರ್ಥಿ ನಾಯಕನ ಗುಂಡಿಕ್ಕಿ ಕೊಲೆ : ಸಿಸಿಟಿವಿ ದೃಶ್ಯದಲ್ಲಿ ಸೆರೆಯಾದ ಘಟನೆ

Prasthutha|

Sub Title ಸುದ್ದಿ + ವೀಡಿಯೋ

- Advertisement -

ಚಂಡೀಘಡ : ಅಕಾಲಿ ದಳದ ಯುವ ಘಟಕದ ನಾಯಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್ ನ ಮೊಹಾಲಿ ಜಿಲ್ಲೆಯಿಂದ ವರದಿಯಾಗಿದೆ. ಮಿಡ್ಡುಖೇರ (ವಿಕ್ಕಿ) ಎಂಬ ವಿದ್ಯಾರ್ಥಿ ನಾಯಕನೇ ಹತ್ಯೆಯಾದ ದುರ್ದೈವಿ. ಈತನನ್ನು ಗುಂಡು ಹಾರಿಸಿ ಹತ್ಯೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮಾತೌರ್ ಮಾರ್ಕೆಟ್ ನಲ್ಲಿ ಮಿಡ್ಡುಖೇರ ಅವರು ತನ್ನ ಕ್ರೀಡಾ ಬಳಕೆಯ ವಾಹನದಲ್ಲಿ ಕುಳಿತುಕೊಳ್ಳುತ್ತಿದ್ದಾಗ ಆತನ ಮೇಲೆ ಮುಸುಕುಧಾರಿಗಳಾದ ಇಬ್ಬರು ದಾಳಿಕೋರರು ಪದೇ ಪದೇ ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಇಡೀ ಘಟನೆ ಅಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -

ಆತ ತನ್ನ ವಾಹನದಲ್ಲಿ ಕುಳಿತಿದ್ದಾಗ ದಾಳಿಕೋರರು ಗುಂಡು ಹಾರಿಸತೊಡಗಿದಾಗ ಆತ ಆತ್ಮರಕ್ಷಣೆಗಾಗಿ ಓಡಿ ಹೋಗಲು ಪ್ರಯತ್ನಿಸಿದ್ದಾನೆ. ಆದರೆ ಆತನ ಮೇಲೆ ಸುಮಾರು 20 ಸುತ್ತು ಗುಂಡು ಹಾರಿಸಿದ ಹಿನ್ನೆಲೆಯಲ್ಲಿ ಉಂಟಾದ ಬಲವಾದ ಏಟಿನಿಂದಾಗಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಕೋರರು ಕ್ಯಾಪ್ ಮತ್ತು ಫೇಸ್ ಮಾಸ್ಕ್ ಧರಿಸಿದ್ದರು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಪ್ರತಿಪಕ್ಷ ಅಕಾಲಿದಳದ ಸದಸ್ಯರಾದ ಮಿಡ್ಡುಖೇರಾ ಅವರು ಪಂಜಾಬ್ ವಿಶ್ವವಿದ್ಯಾಲಯದ ಸಕ್ರಿಯ ವಿದ್ಯಾರ್ಥಿ ನಾಯಕರಾಗಿದ್ದನು. ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆಯೆಂದು ಪೊಲೀಸರು ಶಂಕಿಸಿದ್ದಾರೆ.

ಅಕಾಲಿ ದಳದ ಹಿರಿಯ ನಾಯಕ ಮತ್ತು ಪಕ್ಷದ ವಕ್ತಾರ ದಲ್ಜಿತ್ ಸಿಂಗ್ ಚೀಮಾ, ಈ ಘಟನೆ ರಾಜ್ಯದ “ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆ” ಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಗೆ ಮುಂಚಿತವಾಗಿ ರಾಜ್ಯದಾದ್ಯಂತ ಹೆಚ್ಚಿನ ಭದ್ರತೆ ನಡುವೆ ಈ ಹತ್ಯೆ ನಡೆದಿರುವುದು ಸಾರ್ವಜನಿಕರ ಧೃತಿಗೆಡಿಸಿದೆಯೆಂದು ಚೀಮಾ ಹೇಳಿದ್ದಾರೆ. ಮಾತ್ರವಲ್ಲದೆ, ಉನ್ನತ ಮಟ್ಟದ ತನಿಖೆಗೆ ಕೂಡಾ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.



Join Whatsapp