ಇಬ್ಬರು ಅಮಾಯಕರನ್ನು ಕೊಂದ ‘ಚೆಂಡು ಹೂ’ ರವಿಗೆ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕಂತೆ: ಕಾಂಗ್ರೆಸ್ ಕುಟುಕು

Prasthutha|

ಬೆಂಗಳೂರು: ಇಂದಿರಾ ಗಾಂಧಿ ಕರುಣಿಸಿದ ಅನ್ನ ತಿಂದು ಬೆಳೆದು ಅವರ ವಿರುದ್ಧವೇ ದ್ವೇಷ ಕಾರುತ್ತಿರುವ

- Advertisement -

ಸಿ.ಟಿ.ರವಿ ಮನೆಗೆ ಮಗನಲ್ಲ, ನಾಡಿಗೆ ಪ್ರಜೆಯಲ್ಲ! ಉಳುವವನೇ ಹೊಲದೊಡೆಯ ಎಂಬ ಕ್ರಾಂತಿಕಾರಿ ಕಾರ್ಯಕ್ರಮದ ಫಲವಾಗಿ ಲಕ್ಷಾಂತರ ಕುಟುಂಬಗಳು ಬೆಳಕು ಕಂಡು ಹಸಿವು ನೀಗಿಸಿಕೊಂಡಿದ್ದನ್ನು ಮರೆತಿರುವ ಸಿಟಿ ರವಿ ತಾಯಿಗೂ, ತಾಯ್ನಾಡಿಗೂ ದ್ರೋಹ ಬಗೆಯುವ ಮನುಷ್ಯ ಎಂದು ಕರ್ನಾಟಕ ಕಾಂಗ್ರೆಸ್ ಕಿಡಿಕಾರಿದೆ.

ಈ ಬಗ್ಗೆ ಟ್ವೀಟ್ ಮಾಡಿದ್ದು, ಇಂದಿರಾ ಗಾಂಧಿಯವರ ಮೇಲಿನ ದ್ವೇಷಕ್ಕೆ ಆಕ್ಸಿಡೆಂಟ್ ಮಾಡಿ ಇಬ್ಬರು ಅಮಾಯಕರನ್ನು ಕೊಂದ ‘ಚೆಂಡು ಹೂ’ ರವಿಗೆ ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಬೇಕಂತೆ! ಅದೇ ದ್ವೇಷದಲ್ಲಿ ಇಂದಿರಾ ಗಾಂಧಿಯವರ ಮಹತ್ತರವಾದ ಉಳುವವನೇ ಹೊಲದೊಡೆಯ ಕಾರ್ಯಕ್ರಮವನ್ನ ರದ್ದುಗೊಳಿಸುವಿರಾ ಸಿ.ಟಿ.ರವಿ ಅವರೇ ? ಬಾಂಗ್ಲಾದೇಶವನ್ನು ಪಾಕ್ನೊಂದಿಗೆ ಸೇರಿಸುವಿರಾ!? ಎಂದು ಕಾಂಗ್ರೆಸ್ ಕುಟುಕಿದೆ.

- Advertisement -

ಒಂದೆಡೆ ಅಣ್ಣಾಮಲೈ ವಿರುದ್ಧ ಸಿಎಂ ಸಿನಿಮೀಯ ಡೈಲಾಗ್ ಹೊಡೆಯುವುದು ಇನ್ನೊಂದೆಡೆ ಸಿ.ಟಿ.ರವಿ ಬೆಂಬಲಿಸುವುದು ಸದಾರಮೆ ನಾಟಕದಿಂದ ಕನ್ನಡಿಗರನ್ನ ಮೂರ್ಖರನ್ನಾಗಿಸಲು ಯತ್ನಿಸುತ್ತಿದೆ ಬಿಜೆಪಿ. ಮೋದಿ ಸರ್ಕಾರ ತಮಿಳುನಾಡಿನ ಪರ ಇರಲಿದೆ ಎಂಬ ಅಣ್ಣಾಮಲೈ ಹೇಳಿಕೆಗೆ ಯಾವ ಬಿಜೆಪಿಗನೂ ಮಾತನಾಡದಿರುವುದು ರಾಜ್ಯದ್ರೋಹಿಬಿಜೆಪಿ ಎನ್ನಲು ಸಾಕ್ಷಿ ಎಂದು ಮತ್ತೊಂದು ಟ್ವೀಟ್ ನಲ್ಲಿ ಕಾಂಗ್ರೆಸ್ ಹರಿಹಾಯ್ದಿದೆ.

ತಮಿಳು ನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ರಾಜ್ಯದ ಮೇಕೆದಾಟು ಯೋಜನೆಯ ವಿರುದ್ಧ ಪ್ರತಿಭಟಿಸಿದನ್ನು ಸಿ.ಟಿ.ರವಿ. ರಿಟ್ವೀಟ್ ಮಾಡುವ ಮೂಲಕ ಕರ್ನಾಟಕ ಬಿಜೆಪಿಯ ಕರ್ನಾಟಕದ ವಿರುದ್ಧದ ನಿಲುವು ಬಯಲಾಗಿದೆ. ರಾಜ್ಯ ವಿರೋಧಿ ಬಿಜೆಪಿಯಿಂದ ಕನ್ನಡಿಗರಿಗೆ ಅನ್ಯಾಯವೇ ಹೊರತು ನಯಾಪೈಸೆ ಉಪಯೋಗವಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ರಾಜ್ಯದ್ರೋಹಿ ಸಿ.ಟಿ.ರವಿ  ಕಳೆದ 2 ವರ್ಷದಲ್ಲಿ ನಿಮ್ಮ ಸರ್ಕಾರದ ಒಂದೇ ಒಂದು ಜನಪರ ಯೋಜನೆಯ ಹೆಸರು ಹೇಳಿ. ಇಂದಿರಾ ಕ್ಯಾಂಟೀನ್ ಗೆ ಅನುದಾನ ಕೊಡಲಾಗದ, ಒಂದೂ ಜನಪರ ಯೋಜನೆ ಜಾರಿಗೊಳಿಸಲಾಗದ ಸಿಟಿ ರವಿಯ ಈ ಮಾತು ಕೈಲಾಗದವನು ಮೈ ಪರಚಿಕೊಂಡಂತೆ! ಅಂದ ಹಾಗೆ, ದೀನದಯಾಳ್ ಯಾವ ದೊಣ್ಣೆ ನಾಯಕನೆಂದು ಮೇಲ್ಸೇತುವೆಗೆ ಹೆಸರಿಟ್ಟಿದ್ದೀರಿ? ಎಂದು ಕಾಂಗ್ರೆಸ್ ಕುಟುಕಿದೆ.

Join Whatsapp