ಕೋವಿಡ್ 19 ಸಂಕಷ್ಟ | ಒಮಾನ್ ನಲ್ಲೂ ಭೂ ಸಾರಿಗೆ ಪ್ರವೇಶ ಬಂದ್; ಕಟ್ಟುನಿಟ್ಟಿನ ಕ್ರಮಗಳು

Prasthutha|

ಮಸ್ಕತ್ : ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಒಮಾನ್ ಕೂಡ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ.

- Advertisement -

ಒಮಾನ್ ಗೆ ಆಗಮಿಸುವ ಎಲ್ಲಾ ಭೂ ಸಾರಿಗೆಗಳನ್ನು ಬಂದ್ ಮಾಡಲಾಗಿದೆ. ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವ ಕುರಿತಂತೆ ಇಂದು ಒಮಾನ್ ಗೃಹ ಸಚಿವ ಸಯ್ಯಿದ್ ಹಮೌದ್ ಬಿನ್ ಫೈಸಲ್ ಅಲ್ ಬುಸೈದಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.

ಮುಂದಿನ ಆದೇಶದ ವರೆಗೆ ಎಲ್ಲಾ ಭೂ ಸಾರಿಗೆ ಗಡಿಗಳನ್ನು ಬಂದ್ ಮಾಡಲಾಗಿದೆ. ಒಮಾನ್ ನಾಗರಿಕರು 10 ದಿನಗಳೊಳಗೆ ತಮ್ಮ ದೇಶಕ್ಕೆ ಮರಳಬಹುದು. ಆ ನಂತರ ಭೂ ಸಾರಿಗೆ ಮೂಲಕ ಸ್ವದೇಶಿಯರಿಗೂ ಪ್ರವೇಶ ನಿರ್ಬಂಧಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

- Advertisement -

ಭೂ ಸಾರಿಗೆಯಲ್ಲಿ ಆಗಮಿಸು ಎಲ್ಲರಿಗೂ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯವಾಗಿದೆ. ಎಲ್ಲಾ ವಾಣಿಜ್ಯ ಚಟುವಟಿಕೆಗಳನ್ನು 14 ದಿನಗಳ ಕಾಲ ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಬಂದ್ ಮಾಡುವಂತೆ ಆದೇಶಿಸಲಾಗಿದೆ.  

ಇಂದಿನಿಂದ ಎಲ್ಲಾ ಸಾರ್ವಜನಿಕ ಪಾರ್ಕ್ ಮತ್ತು ಬೀಚ್ ಗಳನ್ನು ಎರಡು ವಾರಗಳ ಕಾಲ ಬಂದ್ ಮಾಡಲಾಗುತ್ತದೆ. ಎಲ್ಲಾ ಪ್ರದೇಶಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.

ನಾಳೆಯಿಂದ ಮುಂದಿನ ಆದೇಶದ ವರೆಗೆ ಸರಕಾರಿ ಮತ್ತು ಖಾಸಗಿ ಸಂಸ್ಥೆಗಳ ಸೇವಾ ಹಾಲ್ ಗಳಲ್ಲಿ, ಶಾಪಿಂಗ್ ಸೆಂಟರ್ ಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ, ಕಾಫಿ ಸೆಂಟರ್ ಗಳಲ್ಲಿ, ಒಳಾಂಗಣ ಕ್ರೀಡಾಂಗಣಗಳಲ್ಲಿ ಶೇ.50ರಷ್ಟು ಮಂದಿಗೆ ಮಾತ್ರ ಪ್ರವೇಶಕ್ಕೆ ಅವಕಾಶವಿದೆ.



Join Whatsapp