ಟ್ವಿಟರ್ ತೊರೆದು KOO App ಮೊರೆ ಹೋಗುತ್ತಿರುವ ಸೆಲೆಬ್ರಿಟಿಗಳು

Prasthutha|

ಆತ್ಮ ನಿರ್ಭರ್ ಭಾಗವಾಗಿ ರಾಜಕಾರಣಿಗಳು ಮತ್ತು ಸೆಲೆಬ್ರೆಟಿಗಳು ಟ್ವಿಟರ್ ಖಾತೆ ತೊರೆದು ಕೂ ಆಪ್ ಮೊರೆ ಹೋಗುತ್ತಿದ್ದಾರೆ. 2020ರ ಆರಂಭದಲ್ಲಿ ಪ್ರಾರಂಭಗೊಂಡ ಕೂ ಆಪ್, ಪ್ರಧಾನಿಯವರ ಮನ್ ಕಿ ಬಾತ್ ನಲ್ಲೂ ಉಲ್ಲೇಖಗೊಂಡಿತ್ತು.
ಈ ಹಿಂದೆ ರಾಷ್ಟ್ರೀಯ ಭದ್ರತಾ ಅಂಶವನ್ನು ಪರಿಗಣಿಸಿ ಚೀನಾದ ಹಲವು ಅಪ್ಲಿಕೇಶನ್ ಗಳನ್ನು ನಿಷೇಧಿಸಿದ ಕೇಂದ್ರ ಸರಕಾರ, ಆತ್ಮ ನಿರ್ಭರ್ ಆಪ್ ಇನೋವೇಶನ್ ನಲ್ಲಿ ಟಿಕ್ ಟಾಕ್ ಗೆ ಬದಲಾಗಿ ಸ್ಥಳೀಯ ಆವೃತ್ತಿ ಎಂದು ಜೋಹೋ ಮತ್ತು ಚಿಂಗಾರಿ ಆಪ್ ಅನ್ನು ಪರಿಚಯಿಸಿತ್ತು. ಕೂ ಆಪ್ ಎಂಬುದು ಟ್ವಿಟರ್ ಗೆ ಬದಲು ಸ್ವದೇಶಿ ಆಪ್ ನ ಪರಿಕಲ್ಪನೆ ಎನ್ನಲಾಗಿದೆ.

- Advertisement -

ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕಾನೂನು ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್, ಸಂಸದರಾದ ತೇಜಸ್ವಿ ಸೂರ್ಯ ಮತ್ತು ಶೋಭಾ ಕರಂದ್ಲಾಜೆ ಹಾಗೂ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ರಾಜಕಾರಣಿಗಳು, ಸೆಲೆಬ್ರಿಟಿಗಳಾದ ಕಂಗನಾ ರಣಾವತ್, ಅನಿಲ್ ಕುಂಬ್ಳೆ ಮುಂತಾದವರು ಕೂಡ ಈಗಾಗಲೇ ಕೂ ಆಪ್ ನಲ್ಲಿ ಖಾತೆ ತೆರೆದಿದ್ದಾರೆ.

Join Whatsapp