ಆತ್ಮನಿರ್ಭರ ಭಾರತದ Koo appನಲ್ಲೂ ಚೀನಾ ಕಂಪೆನಿಯ ಹೂಡಿಕೆ!

Prasthutha|

ನವದೆಹಲಿ : ಆತ್ಮ ನಿರ್ಭರ ಭಾರತ ಹೆಸರಲ್ಲಿ ಟ್ವಿಟರ್ ಗೆ ಪರ್ಯಾಯ ಎನ್ನಲಾದ ಸಾಮಾಜಿಕ ಜಾಲತಾಣ ವೇದಿಕೆ ಕೂ (koo) appಗೂ ಚೀನಾದ ಕಂಪೆನಿಯೊಂದು ಹೂಡಿಕೆ ಇದೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಚೀನಾದ ಗಡಿ ವಿವಾದದ ಹಿನ್ನೆಲೆಯಲ್ಲಿ, ಚೀನಾದ ಹಲವು appಗಳನ್ನು ನಿಷೇಧಿಸಿ ಪ್ರಧಾನಿ ಮೋದಿ ಸರಕಾರ ಆಕ್ರೋಶ ಹೊರಹಾಕಿತ್ತು. ಆದರೆ, ಇದೀಗ ಸ್ವದೇಶಿ ಎನ್ನಲಾದ ಕೂ appನಲ್ಲೂ ಚೀನಾ ಕಂಪೆನಿಯ ಹೂಡಿಕೆಯಿದೆ ಎಂದು ವರದಿಗಳು ತಿಳಿಸಿವೆ.

- Advertisement -

ರೈತರ ಹೋರಾಟದ ವೇಳೆ ಟ್ವಿಟರ್ ಅಭಿಯಾನ ಬಿಜೆಪಿ ಸರಕಾರದ ವಿರುದ್ಧ ತಿರುಗಿರುವುದರಿಂದ, ಬಿಜೆಪಿ ಬೆಂಬಲಿಗ ರಾಜಕಾರಣಿಗಳು, ನಟ-ನಟಿಯರು, ಸೆಲೆಬ್ರಿಟಿಗಳು ಈಗ ಕೂ app ಬಗ್ಗೆ ಆಸಕ್ತಿ ತೋರಿ, ಖಾತೆಗಳನ್ನೂ ತೆರೆದಿದ್ದಾರೆ. ಅಲ್ಲದೆ, koo app ಬಳಸುವಂತೆ ಪ್ರಚಾರವನ್ನೂ ಮಾಡುತ್ತಿದ್ದಾರೆ.

ಆದರೆ, ಕೂ appನಲ್ಲೂ ಚೀನಾದ ಹೂಡಿಕೆಯಿದೆ ಎಂಬುದನ್ನು ಸ್ವತಃ ಕಂಪೆನಿಯೇ ಹೇಳಿಕೊಂಡಿದೆ. ಚೀನಾದ ಶುನವೈ ಕ್ಯಾಪಿಟಲ್, ವೋಕಲ್ & ಕೂ ಕಂಪೆನಿಯಲ್ಲಿ ಆರಂಭವದಲ್ಲಿ ಹೂಡಿಕೆ ಮಾಡಿತ್ತು. ಸೀರಿಸ್ ಎ ಅಡಿಯಲ್ಲಿ ವೋಕಲ್ & ಕೂ ಕಂಪೆನಿ 6.5 ದಶಲಕ್ಷ ಡಾಲರ್ ಮೊತ್ತದ ಬಂಡವಾಳವನ್ನು ಪಡೆಯಲಾಗಿತ್ತು.

- Advertisement -

ಇದರಲ್ಲಿ ಚೀನಾ ಮೂಲದ ಶುನವೈ ಕ್ಯಾಪಿಟಲ್ ಕಲಹರಿ ಕ್ಯಾಪಿಟಲ್, 500 ಸ್ಟಾರ್ಟ್ಸ್ಅಪ್ಸ್, ಆಸೆಲ್ ಪಾರ್ಟ್ನರ್ಸ್, ಬ್ಲೂಮೆ ವೆಂಚರ್ಸ್ ಪಾರ್ಟ್ನರ್ಸ್ ಹೂಡಿಕೆ ಮಾಡಿತ್ತು.

2018ರ ಜುಲೈನಲ್ಲಿ ವೋಕಲ್ ನಲ್ಲಿ ಚೀನಾದ ಶುನವೈ ಕ್ಯಾಪಿಟಲ್ 36 ಕೋಟಿ ರೂ. ಹೂಡಿಕೆ ಮಾಡಿತ್ತು. ಈ ಹಿಂದಿನ ಬ್ರಾಂಡ್ ವೋಕಲ್ ನಲ್ಲಿ ಶುನವೈ ಹೂಡಿಕೆ ಮಾಡಿತ್ತು. ಶುನವೈ ಕಂಪೆನಿ ಶೀಘ್ರವೇ ಕಂಪೆನಿಯಿಂದ ಹೊರಹೋಗಲಿದ್ದಾರೆ ಎಂದು ಕೂ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಪ್ರಮೇಯ ರಾಧಾಕೃಷ್ಣ ಟ್ವೀಟ್ ಮಾಡಿದ್ದಾರೆ.  

Join Whatsapp