ರಾತ್ರೋರಾತ್ರಿ ತಾಯಿ-ಮಗನನ್ನು ವಸತಿ ಗೃಹದಿಂದ ಹೊರಕ್ಕೆ ತಳ್ಳಿದ ಅಧಿಕಾರಿಗಳು, ಬೀದಿಗೆ ಬಿದ್ದ ಕುಟುಂಬ !

Prasthutha|

ಚಾಮರಾಜನಗರ: ಅಧಿಕಾರಿಗಳು ಕುಟುಂಬವೊಂದನ್ನು ರಾತ್ರೋರಾತ್ರಿ ವಸತಿ ಗೃಹದಿಂದ ಹೊರಹಾಕಿದ ಅಮಾನವೀಯ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಎಂ.ಎಂ.ಬೆಟ್ಟದಲ್ಲಿ ನಡೆದಿದೆ.

- Advertisement -

3 ವರ್ಷಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಪ್ರಾಧಿಕಾರದ ಖಾಯಂ ನೌಕರ ಜಯಸ್ವಾಮಿ ಮೃತಪಟ್ಟಿದ್ದರು. ಜೊತೆಗೆ ಮಗ ಶಾಂತಮಲ್ಲೇಶ್ ಹೊರಗುತ್ತಿಗೆ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದ. ಆದರೆ ಒಂದು ವರ್ಷದ ಹಿಂದೆಯಿಂದ ಶಾಂತಮಲ್ಲೇಶ್ ಗೆ ಹೊರಗುತ್ತಿಗೆ ನೌಕರಿಯೂ ಇಲ್ಲದಂತಾಗಿತ್ತು. ಈ ವೇಳೆ ಅನುಕಂಪ ಆಧಾರದ ನೌಕರಿ ಹಾಗು ಮರಣಾನಂತರದ ಸವಲತ್ತು ನೀಡುವಂತೆ ಆಗ್ರಹಿಸಿ ವಸತಿ ಗೃಹದಲ್ಲೇ ಮೃತ ನೌಕರನ ಪತ್ನಿ ಹಾಗೂ ಮಗ ಉಳಿದುಕೊಂಡಿದ್ದರು. ಆದರೆ ಅಧಿಕಾರಿಗಳು ಮಲೆಮಹದೇಶ್ವರ ಬೆಟ್ಟದಲ್ಲಿನ ವಸತಿ ಗೃಹದಲ್ಲಿದ್ದ ಮೃತ ನೌಕರನ ಪತ್ನಿ ಹಾಗೂ ಮಗನನ್ನು ಹೊರಕ್ಕೆ ತಳ್ಳಿದ್ದಾರೆ. ರಾತ್ರೋರಾತ್ರಿ ಮನೆ ಸಾಮಾನುಗಳನ್ನು ಹೊರಗೆ ಹಾಕಿ ದರ್ಪ ಮೆರೆದಿದ್ದಾರೆ. ಇದೀಗ ಮನೆ ಇಲ್ಲದೆ ಕುಟುಂಬ ಬೀದಿಗೆ ಬಿದ್ದಿದೆ. ಅಧಿಕಾರಿಗಳ ನಡೆಯಿಂದ ಕುಟುಂಬ ಬೀದಿಗೆ ಬಂದಿದೆ.



Join Whatsapp