40% ಕಮಿಷನ್ ಪ್ರಕರಣ : ಸರಿಯಾದ ತನಿಖೆ ನಡೆದರೆ ಸರ್ಕಾರ ಪತನ: ಡಿ.ಕೆಂಪಣ್ಣ

Prasthutha|

ತುಮಕೂರು: ರಾಜ್ಯ ಸರಕಾರ ಇದುವರೆಗೂ ರಾಜ್ಯದ ಗುತ್ತಿಗೆದಾರರಿಗೆ ಸುಮಾರು 22 ಸಾವಿರ ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ. ಎಲ್ ಓಸಿ ನೀಡುವಿಕೆಯಲ್ಲಿಯೂ ಶೇ 6ರಿಂದ 10ರಷ್ಟು ಕಮಿಷನ್ ಪಡೆಯಲಾಗುತ್ತಿದೆ. ಸ್ವತಂತ್ರ ತನಿಖೆ ನಡೆಸಿದರೆ, 4 ಜನ ಹಿರಿಯ ಇಂಜಿನಿಯರುಗಳು, 25ಕ್ಕೂ ಹೆಚ್ಚು ಶಾಸಕರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಮನೆಗೆ ಹೋಗಬೇಕಾಗುತ್ತದೆ” ಎಂದು ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಹೇಳಿದ್ದಾರೆ.

- Advertisement -

ತುಮಕೂರು ನಗರದ ಕನ್ನಡ ಭವನದಲ್ಲಿ ತುಮಕೂರು ನಗರ ಗುತ್ತಿಗೆದಾರರ ಸಂಘದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ಯಾಕೇಜ್ ಟೆಂಡರ್ ರದ್ದು ಪಡಿಸಲು ಹೈಕೋರ್ಟ್, ಸುಪ್ರಿಂ ಕೋರ್ಟ್ ಯಾವ ಹಂತದ ಹೋರಾಟಕ್ಕೂ ಸಂಘ ಸಿದ್ಧವಿದೆ. ಇದಕ್ಕೆ ರಾಜ್ಯದ ಎಲ್ಲ ಗುತ್ತಿಗೆದಾರರು ಕೈಜೋಡಿಸಬೇಕು ಎಂದು ಹೇಳಿದರು.

ರಾಜ್ಯದ ಎಲ್ಲಾ ಇಲಾಖೆಗಳಲ್ಲಿ ನಡೆಯುವ ಅಭಿವೃದ್ದಿ ಕಾಮಗಾರಿಗಳಲ್ಲಿ ಪ್ಯಾಕೇಜ್‍ ಟೆಂಡರ್ ಪದ್ದತಿಯನ್ನು ರದ್ದುಪಡಿಸಬೇಕೆಂಬುದು ಕರ್ನಾಟಕ ರಾಜ್ಯದ ಗುತ್ತಿಗೆದಾರರ ಸಂಘದ ಪ್ರಮುಖ ಅಜೆಂಡವಾಗಿದ್ದು, ಇದಕ್ಕಾಗಿ ಯಾವ ರೀತಿಯ ನ್ಯಾಯಾಂಗ ಹೋರಾಟಕ್ಕೂ ಸಂಘ ಸಿದ್ಧವಿದೆ ಎಂದು ತಿಳಿಸಿದರು.

Join Whatsapp