ರಾಜ್ಯದಲ್ಲಿ ಬಾಲ್ಯ ವಿವಾಹ ಸಂಖ್ಯೆ ಹೆಚ್ಚಳ | ಕಳೆದ ಒಂದು ವರ್ಷದಲ್ಲಿ ದಾಖಲಾದ ದೂರುಗಳೆಷ್ಟು ಗೊತ್ತೇ?

Prasthutha: June 22, 2021

ಬೆಂಗಳೂರು: ಲಾಕ್ ಡೌನ್ ಅವಧಿಯಲ್ಲಿ ಕಡಿಮೆ ದರದಲ್ಲಿ ಮದುವೆಯಾಗುತ್ತೆ ಎಂಬ ವಿಚಾರದಲ್ಲಿ ಪೋಷಕರು ಬಾಲ್ಯ ವಿವಾಹಕ್ಕೆ ಮುಂದಾಗಿದ್ದಾರೆ . ಮಕ್ಕಳಿಗೆ ಓದಿ ಏನಾದರು ಸಾಧಿಸುವ ಹಂಬಲ. ಆದರೆ ಕುಟುಂಬದ ಒತ್ತಡದಿಂದ ಹಾಗೂ ಕೋವಿಡ್ ಲಾಕ್ ಡೌನ್ ನಿಂದ ಬಾಲಕಿಯರ ಕನಸು ನುಚ್ಚು ನೂರಾಗಿಸಿದೆ . ಕೋವಿಡ್ ಆರೋಗ್ಯ ಸಮಸ್ಯೆ ಮಾತ್ರ ಸ್ರೃಷ್ಟಿಸಿಲ್ಲ ಇದು ಸಾಮಾಜಿಕ ಸಮಸ್ಯೆಗೂ ಕಾರಣವಾಗಿದೆ.


ರಾಜ್ಯದ ಕೆಲವೊಂದು ಜಿಲ್ಲೆಗಳಲ್ಲಿ ಪೋಷಕರು ಒತ್ತಾಯ ಪೂವ್ರಕವಾಗಿ ಮದುವೆ ಮಾಡಿಸಿದ್ದಾರೆ . ಬಾಲಕಿಯ ಇಚ್ಛೆಗೆ ವಿರುದ್ದವಾಗಿ ಪಾಲಕರು ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದಾರೆ ಎಂದು ವರದಿಗಳು ತಿಳಿದುಬಂದಿದೆ.

ಕಳೆದ ಒಂದು ವರ್ಷದಿಂದ ಸಾಕಷ್ಟು ಪ್ರಕರಕರಣಗಳು ದಾಖಲಾಗಿವೆ . ಕೆಲವು ಅಧಿಕೃತವಾಗಿ ದಾಖಲಾದರೆ ಮತ್ತೆ ಕೆಲವು ಕದ್ದುಮುಚ್ಚಿ ನಡೆದು ಹೋಗಿವೆ. ರಾಜ್ಯ ಸರ್ಕಾರ ನೀಡುವ ಅಧಿಕೃತ ಅಂಕಿ – ಅಂಶಗಳ ಪ್ರಕಾರ ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ ಬಾಲ್ಯ ವಿವಾಹದ ಕುರಿತಾಗಿ 3589 ದೂರುಗಳು ಬಂದಿವೆ. ಈ ಪೈಕಿ 3277 ಬಾಲ್ಯ ವಿವಾಹಗಳನ್ನು ಇಲಾಖೆಯ ಮಧ್ಯಪ್ರವೇಶದಿಂದಾಗಿ ತಡೆ ಹಿಡಿಯಲಾಗಿದೆ. ಹಾಗೂ 208 ಎಫ್‌ಐಆರ್ ಗಳು ದಾಖಲಾಗಿವೆ. ಏಪ್ರಿಲ್ 2020 ರಿಂದ ಮಾರ್ಚ್ 2021 ರ ವರೆಗೆ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ 44 ದೂರುಗಳು ಬಂದಿವೆ. ಈ ಪೈಕಿ 31 ಬಾಲ್ಯವಿವಾಹಗಳನ್ನು ತಡೆಯಲಾಗಿದೆ. ಹೀಗಿದ್ದರೂ 13 ವಿವಾಹಗಳು ನಡೆದಿವೆ. 13 ಪ್ರಕರಣಗಳು ದಾಖಲಾಗಿವೆ.

ಕೋವಿಡ್ ಅವಧಿಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಳವಾಗಿದೆ. ಕೋವಿಡ್ ಲಾಕ್‌ಡೌನ್ ಕಾರಣದಿಂದಾಗಿ ಹಲವು ಪ್ರಕರಣಗಳು ಇಲಾಖೆ ಅಥವಾ ಸ್ವಯಂ ಸೇವಾ ಸಂಸ್ಥೆಗಳ ಗಮನಕ್ಕೆ ಬಾರದೆ ನಡೆದು ಹೋಗಿವೆ. ಹೀಗಿದ್ದರೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಂದ ಬಾಲ್ಯ ವಿವಾಹಗಳನ್ನು ತಡೆಯುವ ಪ್ರಯತ್ನ ನಡೆದಿವೆ. ಆದರೆ ಲಾಕ್‌ಡೌನ್ ಕಾರಣದಿಂದಾಗಿ ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರ ಓಡಾಟಕ್ಕೂ ನಿರ್ಬಂಧ ಇದಿದ್ದರಿಂದ ಪೂರ್ಣ ಪ್ರಮಾಣದಲ್ಲಿ ಅವರಿಗೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಇದರ ಪರಿಣಾಮ ಈ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಗಮನಕ್ಕೆ ಬಾರದೆ ಬಾಲ್ಯ ವಿವಾಹಗಳು ನಡೆದಿವೆ ಎಂದು ಹೇಳುತ್ತಾರೆ ತಳಮಟ್ಟದ ಸಂಶೋಧನೆ ಮತ್ತು ವಕಾಲತ್ತು ಚಳುವಳಿ (grassroots research and advocacy movement) ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಸವರಾಜ್.

ಕೋವಿಡ್ ಲಾಕ್‌ಡೌನ್ ಪರಿಣಾಮವಾಗಿ ಶಾಲೆಗಳು ಮುಚ್ಚಿರುವುದು ಗ್ರಾಮೀಣ ಭಾಗಗಳಲ್ಲಿ ಬಾಲ ವಿವಾಹ ಹೆಚ್ಚಳವಾಗಲು ಕಾರಣವಾಗಿದೆ. ಅದರ ಜೊತೆಗೆ ಆರ್ಥಿಕ ಪರಿಸ್ಥಿತಿಯೂ ಒಂದು ಕಾರಣ ಎಂಬುವುದು ಗಮನಾರ್ಹ ಸಂಗತಿ. ಲಾಕ್‌ಡೌನ್ ಅವಧಿಯಲ್ಲಿ ಮದುವೆ ಖರ್ಚು ಕಡಿಮೆ ಎಂಬ ಕಾರಣಕ್ಕಾಗಿಯೂ ಬಾಲ್ಯ ವಿವಾಹಗಳು ನಡೆಯುತ್ತಿವೆ ಎಂಬುವುದು ಬಹುಮುಖ್ಯವಾದ ಅಂಶವಾಗಿದೆ. ಅಲ್ಲದೆ, ಇತರ ಸಾಮಾಜಿಕ ಕಾರಣಗಳು ಒಳಗೊಂಡಿವೆ. ಬಾಲ್ಯ ವಿವಾಹಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಬಾಲ್ಯ ವಿವಾಹದಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಗೋಡೆ ಬರಹಗಳನ್ನು ಬರೆಸಲಾಗಿದೆ. ಕರ ಪತ್ರಗಳ ಮೂಲಕವೂ ಇಲಾಖೆ ಜಾಗೃತಿ ಮೂಡಿಸುತ್ತಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ