ನಕಲಿ ಲಸಿಕೆ ಶಿಬಿರಗಳ ತಡೆಯಲು ಹೊಸ ನೀತಿ ರೂಪಿಸಲು ಬಾಂಬೆ ಹೈಕೋರ್ಟ್‌ ಆದೇಶ

Prasthutha|

ಮುಂಬೈ : ನಕಲಿ ಲಸಿಕೆ ಮತ್ತು ಲಸಿಕೆಗೆ ಸಂಬಂಧಿಸಿದ ವಂಚನೆಗಳನ್ನು ತಡೆಯಲು ನಿಯಮಗಳನ್ನು ರೂಪಿಸುವಂತೆ ಮಹಾರಾಷ್ಟ್ರ ಸರಕಾರ, ಬೃಹನ್ಮುಂಬಯಿ ಮುನ್ಸಿಪಲ್‌ ಕಾರ್ಪೊರೇಶನ್‌ ಗೆ ಬಾಂಬೆ ಹೈಕೋರ್ಟ್‌ ಮಂಗಳವಾರ ನಿರ್ದೇಶಿಸಿದೆ.

- Advertisement -

ಭಾರತ್‌ ಬಯೋಟೆಕ್‌ ಕೋವ್ಯಾಕ್ಸಿನ್‌ ಲಸಿಕೆ ನೀಡುವಿಕೆಯ ಮೂರನೇ ಹಂತದ ಅಂಕಿಅಂಶಗಳನ್ನು ಭಾರತೀಯ ಪ್ರಧಾನ ಔಷಧ ನಿಯಂತ್ರಕರಿಗೆ ಸಲ್ಲಿಸಿದ್ದಾರೆ. ಔಷಧ ನಿಯಂತ್ರಕರ ತಜ್ಞರ ಸಮಿತಿ ಈ ಬಗ್ಗೆ ಇಂದು ಮಾತುಕತೆ ನಡೆಸಲಿದೆ ಎಂದು ವರದಿಗಳು ತಿಳಿಸಿವೆ.

ನಕಲಿ ಲಸಿಕೆಗಳನ್ನು ನೀಡಿದ ಲಸಿಕೆ ಶಿಬಿರವೊಂದರ ಬಗ್ಗೆ ಪತ್ರಿಕೆಗಳಲ್ಲಿ ಬಂದಿರುವುದನ್ನು ಗಮನಿಸಿ ಹೈಕೋರ್ಟ್‌ ನ್ಯಾಯಮೂರ್ತಿಗಳಾದ ದೀಪಾಂಕರ್‌ ದತ್ತಾ ಮತ್ತು ಜಿ.ಎಸ್.‌ ಕುಲಕರ್ಣಿ ಈ ಆದೇಶ ನೀಡಿದ್ದಾರೆ. ಮುಂಬೈಯ ಕಂಡಿವಲಿ ಪ್ರದೇಶದ ಹೌಸಿಂಗ್‌ ಸೊಸೈಟಿಯೊಂದರಲ್ಲಿ ನಡೆಸಲಾದ ಲಸಿಕೆ ಶಿಬಿರದಲ್ಲಿ ನಕಲಿ ಕೋವಿಡ್‌ ಲಸಿಕೆಗಳನ್ನು ನೀಡಿದ ಬಗ್ಗೆ ವರದಿಗಳಾಗಿದ್ದವು.  

Join Whatsapp