TRP ಹಗರಣದಲ್ಲಿ ಅರ್ನಾಬ್ ಗೋಸ್ವಾಮಿ ಆರೋಪಿ: ಮುಂಬೈ ಪೊಲೀಸರಿಂದ ಚಾರ್ಜ್ ಶೀಟ್

Prasthutha|

ಮುಂಬೈ: ಟೆಲಿವಿಷನ್ ರೇಟಿಂಗ್ ಪಾಯಿಂಟ್ಸ್ (TRP) ಹಗರಣದಲ್ಲಿ ಮುಂಬೈ ಪೊಲೀಸರು ಮಂಗಳವಾರ ಸಲ್ಲಿಸಿದ ಚಾರ್ಜ್‌ಶೀಟ್ ನಲ್ಲಿ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಆರೋಪಿ ಎಂದು ಉಲ್ಲೇಖಿಸಲಾಗಿದೆ.

- Advertisement -

ಅರ್ನಾಬ್ ಗೋಸ್ವಾಮಿ ಸೇರಿದಂತೆ ಸಿಒಒ ಪ್ರಿಯಾ ಮುಖರ್ಜಿ, ಶಿವೇಂಡು ಮುಲೇಲ್ಕರ್ ಮತ್ತು ಶಿವ ಸುಂದರಂ ಅವರನ್ನು 1800 ಪುಟಗಳ ಎರಡನೇ ಪೂರಕ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಈ ಹಗರಣದಲ್ಲಿ ಆರೋಪಿಗಳ ಸಂಖ್ಯೆ ಇಪ್ಪತ್ತೆರಡಕ್ಕೆ ಏರಿಕೆಯಾಗಿದೆ. ಇದಕ್ಕೂ ಮೊದಲು ಹದಿನೈದು ಆರೋಪಿಗಳ ವಿರುದ್ಧ ಮಾತ್ರ ದೋಷಾರೋಪ ದಾಖಲಾಗಿತ್ತು.

ಕಳೆದ ವರ್ಷ TRP ಹಗರಣ ಬೆಳಕಿಗೆ ಬಂದಿದ್ದು, ಚಾನೆಲ್‌ಗಳು ತಮ್ಮ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಲು ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಾರ್ಕ್) ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಪಾರ್ಥೋ ದಾಸ್‌ಗುಪ್ತಾ ಅವರಿಗೆ ಲಂಚ ನೀಡಿದ್ದವು.

- Advertisement -

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಬಾರ್ಕ್‌ನ ಮಾಜಿ ಸಿಒಒ ಸೇರಿದಂತೆ 13 ಜನರನ್ನು ಬಂಧಿಸಿದ್ದರು. ಮೋಸ, ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶದ ಆರೋಪಗಳನ್ನು ಅವರ ಮೇಲೆ ಹೊರಿಸಲಾಗಿದೆ.

ಬಾರ್ಕ್‌ ಸಮೀಕ್ಷೆಯಲ್ಲಿ ತಮ್ಮ ಚಾನೆಲ್‌ ಅನ್ನು ವೀಕ್ಷಿಸುತ್ತಿರುವವರ ಸಂಖ್ಯೆ ನಕಲಿಯಾಗಿ ಸೃಷ್ಟಿಸುವ ಜಾಲ TRP ಹಗರಣವಾಗಿದೆ.

Join Whatsapp