ಡ್ರಗ್ಸ್ ಜಾಲ : ಮಂಗಳೂರು ಮೂಲದ ಆಂಕರ್ ಅನುಶ್ರೀಗೆ ಸಿಸಿಬಿ ನೋಟೀಸ್!?

Prasthutha|

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆಯುತ್ತಿದ್ದು, ಇಂದು ಮಂಗಳೂರು ಮೂಲದ ಕಿರುತೆರೆ ಆಂಕರ್ ಆಗಿರುವ ಅನುಶ್ರೀಗೆ ಸಿಸಿಬಿ ನೋಟಿಸು ನೀಡಿದೆ. ಮಂಗಳೂರು ಸಿಸಿಬಿ ತಂಡ ವಾಟ್ಸಪ್ ಮೂಲಕ ಅನುಶ್ರೀಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸು ನೀಡಿದೆ.

ಇತ್ತೀಚೆಗೆ ಬಂಧನಕ್ಕೊಳಗಾಗಿದ್ದ ‘ಎಬಿಸಿಡಿ’ ಸಿನೆಮಾದಲ್ಲಿ ನಟಿಸಿದ್ದ ಬಾಲಿವುಡ್ ನಟ ಕಿಶೋರ್ ಶೆಟ್ಟಿಯ ಆಪ್ತನಾಗಿರುವ ತರುಣ್ ಎನ್ನುವವನೀಡಿದ್ದ ಮಾಹಿತಿಯ ಮೇರೆಗೆ ಅನುಶ್ರೀಗೆ ನೋಟಿಸು ನೀಡಲಾಗಿದೆ.  

- Advertisement -

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅನುಶ್ರೀ, “ನನಗೆ ಯಾವುದೇ ನೋಟಿಸು ಬಂದಿಲ್ಲ” ಎಂದು ವರದಿಗಳನ್ನು ನಿರಾಕರಿಸಿದ್ದಾರೆ

- Advertisement -