ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ ಇನ್ನಿಲ್ಲ

Prasthutha|

ಬೆಂಗಳೂರು: ಖ್ಯಾತ ಹಿನ್ನೆಲೆ ಗಾಯಕಿ, ಇತ್ತೀಚೆಗಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ವಾಣಿ ಜಯರಾಮ್ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು.

- Advertisement -


ಕನ್ನಡ ಸೇರಿ 19 ಭಾಷೆಗಳಲ್ಲಿ ಹಾಡಿದ್ದ ಗಾಯಕಿ ವಾಣಿ ಜಯರಾಮ್ ಅವರು, ಈವರೆಗೆ ಸುಮಾರು 10,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದರು. ಚೆನ್ನೈನ ತಮ್ಮ ನಿವಾಸದಲ್ಲಿ ವಾಣಿ ಜಯರಾಮ್ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


ವಾಣಿಜಯರಾಂ ಕನ್ನಡ, ಹಿಂದಿ ತೆಲುಗು, ತಮಿಳು,ಮಲಯಾಳಂ,ಮರಾಠಿ,ಓಡಿಯಾ,ಗುಜರಾತಿ ಹಾಗೂ ಬಂಗಾಳಿ ಭಾಷೆಯಲ್ಲಿ ಹಾಡಿದ್ದಾರೆ.

- Advertisement -


ವಾಣಿ ಜಯರಾಂ ಅವರು ಹುಟ್ಟಿದ್ದು 1945ರಲ್ಲಿ. ಅವರ ಮೂಲ ಹೆಸರು ಕಲಿವಾಣಿ. ಅಪ್ಪನ ಹೆಸರು ದೊರೆಸ್ವಾಮಿ ಅಯ್ಯಂಗಾರ್ ಮತ್ತು ತಾಯಿ ಪದ್ಮಾವರಿ. ರಾಷ್ಟ್ರಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿಗಳಿಂದ ಪುರಸ್ಕೃತಗೊಂಡಿದ್ದಾರೆ.

Join Whatsapp