ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೇರಳದ ಉಭಯಲಿಂಗಿ ದಂಪತಿ!

Prasthutha|

ತಿರುವನಂತಪುರ: ಜಿಯಾ ಗಂಡಾಗಿ ಹುಟ್ಟಿ ಹೆಣ್ಣಾಗಿಯೂ, ಜಾಹದ್ ಹೆಣ್ಣಾಗಿ ಹುಟ್ಟಿ ಗಂಡಾಗಿಯೂ ಬದಲಾಗಿ ಉಭಯಲಿಂಗಿಗಳೆನಿಸಿದ್ದರು.

- Advertisement -


ಕೇರಳದ ಕೋಝಿಕ್ಕೋಡಿನ ಈ ಉಭಯಲಿಂಗಿ ದಂಪತಿ ಜಿಯಾ ಮತ್ತು ಜಾಹದ್ ಇದೇ ಮಾರ್ಚ್ ನಲ್ಲಿ ತಮ್ಮ ಮೊದಲ ಮಗುವನ್ನು ಎದುರು ನೋಡುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಇವರು ಒಟ್ಟಾಗಿ ದಂಪತಿಯರಂತೆ ವಾಸಿಸುತ್ತಿದ್ದಾರೆ.


“ನಾನು ಹುಟ್ಟಿನಿಂದ ಹೆಣ್ಣಲ್ಲ; ನನ್ನ ದೇಹವೂ ಹಾಗಿರಲಿಲ್ಲ. ಆದರೆ ನನ್ನೊಳಗೊಂದು ಮಗು ಅಮ್ಮ ಎನ್ನುವುದು ಕೇಳುತ್ತಲೇ ಇತ್ತು. ಕಳೆದ ಮೂರು ವರ್ಷಗಳಿಂದ ನನ್ನಂತೆಯೇ ಉಭಯಲಿಂಗಿಯಾದ ಜಾಹದ್ ಜೊತೆಗೆ ವಾಸಿಸುತ್ತಿದ್ದೇನೆ. ಈಗ ಆತ ತಂದೆ, ನಾನು ತಾಯಾಗುತ್ತಿದ್ದೇವೆ, ಗರ್ಭಕ್ಕೆ ಎಂಟನೇ ತಿಂಗಳು” ಎಂದು ಜಿಯಾ ಫೋಟೋ ಸಹಿತ ಪೋಸ್ಟ್ ಹಾಕಿದ್ದಾಳೆ.
ಜಿಯಾ ಗಂಡಾಗಿ ಹುಟ್ಟಿ ಹೆಣ್ಣಾಗಿಯೂ, ಜಾಹದ್ ಹೆಣ್ಣಾಗಿ ಹುಟ್ಟಿ ಗಂಡಾಗಿಯೂ ಬದಲಾಗಿ ಉಭಯಲಿಂಗಿಗಳೆನಿಸಿದ್ದರು.

- Advertisement -


“ಇದು ಭಾರತದ ಮೊದಲ ಟ್ರಾನ್ಸ್ ಕಪಲ್ ಬಸಿರು” ಎಂದೂ ಜಿಯಾ ಪೋಸ್ಟ್ ಮಾಡಿದ್ದಾಳೆ. ಮಗುವಿನ ಹೆಸರು ಜೀವನ್ ಎಂದು ಅವರು ಈಗಾಗಲೇ ತೀರ್ಮಾನಿಸಿದ್ದಾರೆ.
ಅವರ ಈ ಇನ್ ಸ್ಟಾಗ್ರಾಮ್ ಪೋಸ್ಟ್ ಸಾವಿರಾರು ಲೈಕ್ ಮತ್ತು ಶೇರ್’ಗಳನ್ನು ಕಂಡಿದೆ. ಅವರಿಗೆ ಹೃದಯ ಇಮೋಜಿಗಳ ಕಮೆಂಟ್ ರಾಶಿ ಬಿದ್ದಿದೆ.
“ಶುದ್ಧ ಪ್ರೀತಿಗೆ ಯಾವುದೇ ಗಡಿಗೆರೆ ಇಲ್ಲ. ನಾವು ಇಂದು ಇನ್ ಸ್ಟಾಗ್ರಾಮಿನಲ್ಲಿ ಬಹು ಸುಂದರವಾದ ಪೋಸ್ಟ್ ನೋಡಿದೆವು. ನಿಮ್ಮ ಶಕ್ತಿ ಹೆಚ್ಚಲಿ”
“ತುಂಬ ಆನಂದಾನುಭೂತಿ ಆಗುತ್ತಿದೆ. ದೇವರ ನಿಮ್ಮನ್ನೆಲ್ಲ ಹರಸಲಿ” ಹೀಗೆ ಕಾಮೆಂಟ್ ಮಹಾಪೂರವೇ ಹರಿದಿದೆ.

Join Whatsapp