ಬಿಹಾರ: ಮೆದುಳಿನ ರಕ್ತಸ್ರಾವಕ್ಕೆ ಒಳಗಾಗಿದ್ದ ವೃದ್ಧೆಯೊಬ್ಬರನ್ನು ಸ್ಟ್ರೆಚ್ಚರ್ ಲಭ್ಯವಿಲ್ಲದ ಕಾರಣ ಸರ್ಕಾರಿ ಆಸ್ಪತೆಗೆ ಪ್ಲಾಸಿಕ್ ಗೋಣಿಚೀಲದ ಸಾಗಿಸಿದ ಆಘಾತಕಾರಿ ಘಟನೆ ಬಿಹಾರದ ಭೋಜಪುರದಲ್ಲಿ ನಡೆದಿದೆ.
ಅಸಕ್ತ ಮಹಿಳೆಯನ್ನು ಧೂಳು ತುಂಬಿದ ರಸ್ತೆಯಲ್ಲಿ ಗೋಣಿಚೀಲದ ಮೇಲೆ ಮಲಗಿಸಿ ಭೋಜಪುರದ ಸದರ್ ಆಸ್ಪತ್ರೆಯ ತುರ್ತು ವಿಭಾಗಕ್ಕೆ ಕೊಂಡೊಯ್ಯುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಯಾವುದೇ ಸ್ಟ್ರೆಚ್ಚರ್ ವ್ಯವಸ್ಥೆಯಿಲ್ಲದ ಕಾರಣ ವೈದ್ಯರನ್ನು ಸಂಪರ್ಕಿಸಲು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಸುತ್ತಾಡಿಸಿರುವುದು ಖೇದಕರ ಎಂದು ಮಹಿಳೆಯ ಸಂಬಂಧಿಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸ್ಟ್ರಚರ್ ವ್ಯವಸ್ಥೆಗೊಳಿಸುವಂತೆ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಮನವಿ ಮಾಡಿದ ಹೊರತಾಗಿಯೂ ಅವರು ನಮ್ಮ ಕಡೆ ಗಮನ ಹರಿಸಿಲ್ಲವೆಂದು ಸಂತ್ರಸ್ತೆಯ ಮೊಮ್ಮಗ ಮುನ್ನ ಕುಮಾರ್ ಆರೋಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಬಿಹಾರದ ಪ್ರತಿಪಕ್ಷದ ನಾಯಕ ಮತ್ತು ರಾಷ್ಟ್ರೀಯ ಜನತಾದಳ ನಾಯಕ ತೇಜಸ್ವಿ ಯಾದವ್ ಅವರು ಪ್ಲಾಸ್ಟಿಕ್ ಚೀಲದಲ್ಲಿ ಮಹಿಳೆಯನ್ನು ಸಾಗಿಸುವ ಫೋಟೋವನ್ನು ಹಂಚಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಜೆಪಿ ಬೆಂಬಲಿತ ಸರ್ಕಾರದ ದುರವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಟೀಕಿಸಿದ್ದಾರೆ.