ಡೆಂಗ್ಯೂ ಸಹಿತ ನಿಗೂಢ ಜ್ವರಕ್ಕೆ ಯುಪಿಯಲ್ಲಿ 84 ಮಕ್ಕಳು ಸಹಿತ 110 ಸಾವು

Prasthutha|

ಕಾನ್ಪುರ: ಯುಪಿಯಲ್ಲಿ ಕಾಣಿಸಿಕೊಂಡಿರುವ ಡೆಂಗ್ಯೂ ಸೇರಿದಂತೆ ನಿಗೂಢ ಜ್ವರ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ. ಈ ರೀತಿಯ ಜ್ವರಕ್ಕೆ ಫಿರೋಝಬಾದ್ ನಲ್ಲಿ ಕಳೆದ 24 ಗಂಟೆಗಳಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 110 ಏರಿಕೆಯಾಗಿದೆ. ಇದರಲ್ಲಿ 84 ಮಕ್ಕಳು ಸೇರಿದ್ದಾರೆ.

- Advertisement -

ಪ್ರಸಕ್ತ ಫಿರೋಝಾಬಾದ್ ನಲ್ಲಿ ಎರಡು ವಾರಗಳ ಅವಧಿಯಲ್ಲಿ 578 ಡೆಂಗ್ಯೂ ಪ್ರಕರಣ ಪತ್ತೆಯಾಗಿರುವುದು ಜನತೆಯನ್ನು ಕಂಗೆಡಿಸಿದೆ. ಅದರಲ್ಲಿ ಮೂರನೇ ಎರಡರಷ್ಟು ಭಾಗ ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಿರುವುದು ವಿಶೇಷ.

ಈ ಜ್ವರದಿಂದಾಗಿ ರಾಜ್ಯದೆಲ್ಲೆಡೆ 150 ಕ್ಕೂ ಅಧಿಕ ಜನರು ಅದರಲ್ಲೂ ವಿಶೇಷವಾಗಿ ಹೆಚ್ಚಿನ ಮಕ್ಕಳು ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಆಗ್ರಾ, ಮಥುರಾ ಮತ್ತು ಮೈನ್ ಪುರಿಯಲ್ಲಿ ವೈರಲ್ ಸೋಂಕಿನ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ.
ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆ, ವೈದ್ಯರ ಕೊರತೆಯಿಂದಾಗಿ ಸಾವಿನ ಪ್ರಮಾಣ ಹೆಚ್ಚಾಗಲೂ ಪ್ರಮುಖ ಕಾರಣವೆಂದು ಹೇಳಲಾಗುತ್ತಿದೆ. ಮಾತ್ರವಲ್ಲ ಆಸ್ಪತ್ರೆಯಲ್ಲಿ ತಲೆದೋರಿರುವ ಹಾಸಿಗೆ, ವೈದ್ಯರ ಕೊರತೆಯಿಂದಾಗಿ ಅನೇಕ ಮಕ್ಕಳು ಒದ್ದಾಡಿ ಸಾವನ್ನಪ್ಪಿದ್ದಾರೆಂದು ಮಾಧ್ಯಮಗಳು ವರದಿ ಮಾಡುತ್ತಿವೆ.

- Advertisement -

ವೈದ್ಯಕೀಯ ನಿರ್ಲಕ್ಷ ಮತ್ತು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಎಡವಿರುವ ಸರ್ಕಾರದ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಫಿರೋಝಾಬಾದ್ ಮುನ್ಸಿಪಾಲ್ ಕಾರ್ಪೋರೇಶನ್ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಿದೆ.

Join Whatsapp