ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ 4ನೇ ವರ್ಷಾಚರಣೆ: ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಲೋಕಾರ್ಪಣೆ

Prasthutha|

ಬೆಂಗಳೂರು: ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಮಂಗಳೂರು ಇದರ 4 ನೇ ವರ್ಷಾಚರಣೆಯ ಪ್ರಯುಕ್ತ ಮಂಗಳೂರು ಲಯನ್ಸ್ ಕ್ಲಬ್ ಸೆಂಚುರಿಯನ್ ಇದರ ಸಹಭಾಗಿತ್ವದಲ್ಲಿ ಮಂಗಳೂರಿನ ಮಸ್ಜಿದ್ ಜೀನತ್ ಭಕ್ಷ್ ನ ಮಾಜಿ ಅಧ್ಯಕ್ಷ ಮರ್ಹೂಮ್ ಅಬ್ದುಲ್ ಹಮೀದ್ ರವರ ಸ್ಮರಣಾರ್ಥ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಲೋಕಾರ್ಪಣೆ ಕಾರ್ಯಕ್ರಮವು ಇತ್ತೀಚೆಗೆ  ಕುದ್ರೋಳಿಯ ಆಟೋ ರಿಕ್ಷಾ ಪಾರ್ಕ್ ಬಳಿ ನಡೆಯಿತು.

- Advertisement -

ನಡುಪಲ್ಲಿ ಕುದ್ರೋಳಿ  ಮಸೀದಿಯ ಖತೀಬ್  ರಿಯಾಝ್ ಫೈಝಿ ಕಕ್ಕಿಂಜೆ ದುಆ ನೆರವೇರಿಸಿದರು. ಮಿತ್ತಬೈಲ್ ಇರ್ಷಾದ್ ದಾರಿಮಿ ಅಲ್ ಅಝ್ ಹರಿ ನೀರಿನ ಟ್ಯಾಂಕ್ ಲೋಕಾರ್ಪಣೆ ಗೈದರು.

ಮಂಗಳೂರು ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಬಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

- Advertisement -

ಮುಖ್ಯ ಅತಿಥಿಗಳಾಗಿ ಕುದ್ರೋಳಿ ಕಾರ್ಪೊರೇಟರ್ ಶಂಸುದ್ದೀನ್, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್ , ಕುದ್ರೋಳಿ ಮಾಜಿ ಕಾರ್ಪೋರೇಟರ್ ಗಳಾದ ಅಬೂಬಕ್ಕರ್ ಕುದ್ರೋಳಿ, ಅಬ್ದುಲ್ ಅಝೀಝ್ , ಎಸ್.ಡಿ.ಪಿ.ಐ. ಕುದ್ರೋಳಿ ವಾರ್ಡ್ ಅಧ್ಯಕ್ಷ ಮುಝೈರ್, ಮಂಗಳೂರು ಫ್ರೂಟ್ ಮರ್ಚೆಂಟ್  ಆಸೀಫ್, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅರ್ಷದ್ ಪೋಪಿ, ಕುದ್ರೋಳಿ ಆಟೋರಿಕ್ಷಾ ಪಾರ್ಕ್ ಅಧ್ಯಕ್ಷ ಝುಬೈರ್ ಅಹ್ಮದ್, ಹನೀಫ್ ಮಾಸ್ಟರ್ ಮುಂತಾದವರು ಭಾಗವಹಿಸಿದ್ದರು. ಗೌರವ ಸಲಹೆಗಾರ ಹುಸೈನ್ ಕಾಟಿಪಳ್ಳ ಸ್ವಾಗತಿಸಿ ವಂದಿಸಿದರು.



Join Whatsapp