ಪಾಕ್ ಪರ ಘೋಷಣೆ ಕೂಗಿಲ್ಲ: ತಪ್ಪೊಪ್ಪಿಗೆಗೆ ಬಂಧಿತರ ನಕಾರ

Prasthutha|

ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಮೂವರೂ ವಿಚಾರಣೆ ವೇಳೆ ತಪ್ಪೊಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆಂದು ತಿಳಿದುಬಂದಿದೆ. ನಾವು ಪಾಕ್ ಪರ ಘೋಷಣೆ ಕೂಗಿಲ್ಲ ಎಂದು ಅವರು ವಿಚಾರಣೆ ವೇಳೆ ಹೇಳಿದ್ದಾರೆ.

- Advertisement -

ಪ್ರಕರಣ ಸಂಬಂಧ ಹಾವೇರಿ ಜಿಲ್ಲೆಯ ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ (35), ಬೆಂಗಳೂರಿನ ಜಯಮಹಲ್‌ನ ಮುನಾವರ್ ಅಹಮದ್ (29) ಮತ್ತು ದೆಹಲಿಯ ಕೃಷ್ಣಗಂಜ್‌ನ ಮೊಹಮ್ಮದ್ ಇಲ್ತಾಝ್ (31) ಎಂಬುವರನ್ನು ಕೇಂದ್ರ ವಿಭಾಗದ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಮೂವರೂ ವಿಚಾರಣೆ ವೇಳೆ ನಾವು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿಲ್ಲ. ನಮ್ಮ ನಾಯಕನ ಪರವಾಗಿ ಅಷ್ಟೇ ಘೋಷಣೆ ಕೂಗಿದ್ದೇವೆಂದು ಹೇಳಿದ್ದಾರೆ.

- Advertisement -

ಬಂಧಿತರಿಂದ ವಿವರವಾದ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಡಿಸಿಪಿ (ಕೇಂದ್ರ) ಎಚ್‌ಟಿ ಶೇಖರ್ ತಿಳಿಸಿದ್ದಾರೆ.



Join Whatsapp