ನಿಮ್ಮ ವಿರುದ್ಧವೂ ಪ್ರತಿಭಟನೆ ನಡೆಸಬೇಕಾಗುತ್ತದೆ: ಶಾಸಕ ಅಶೋಕ್ ಕುಮಾರ್ ರೈಗೆ ಎಚ್ಚರಿಕೆ

Prasthutha|

ಪುತ್ತೂರು: ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಮತ್ತು ವಿಧಾನ ಸೌಧದಲ್ಲಿ ಪಾಕ್ ಪರ ಘೋಷಣೆ ಖಂಡಿಸಿ ಭಯೋತ್ಪಾದನಾ ವಿರೋಧಿ ಸಮಿತಿ ಎಂಬ ಬ್ಯಾನರ್ ಅಡಿಯಲ್ಲಿ ಬಿಜೆಪಿ ಕಾರ್ಯಕರ್ತರು ಪುತ್ತೂರಿನ ದರ್ಬೆ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ್ದಾರೆ. ವೇಳೆ ಅನಿಲ್ ಕುಮಾರ್ ದಡ್ಡು ಎಂಬಾತ ಪುತ್ತೂರು ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.

- Advertisement -

ನೀವು ಬಹುಸಂಖ್ಯಾತ ಸಮುದಾಯದ ಮತ ಪಡೆದು ಶಾಸಕರಾಗಿ ಆಯ್ಕೆಯಾದವರು, ರಾಜ್ಯವಾಳುವ ಆಡಳಿತ ಪಕ್ಷದವರಂತೆ ವರ್ತನೆ ಮಾಡಬೇಡಿ. ಬೆಳಿಗ್ಗೆ ಎದ್ದ ಕೂಡಲೇ ದೇವಸ್ಥಾನಗಳಿಗೆ ಭೇಟಿ ನೀಡುವವರು ನೀವು, ಅದರೆ ಅದೇ ದೇವರನ್ನು ಆರಾಧನೆ ಮಾಡುವವರ ಮೇಲೆ ದೌರ್ಜನ್ಯವಾಗುತ್ತಿದೆ, ಈ ಬಗ್ಗೆ ನೀವು ಒಂದು ಮಾತನ್ನೂ ಆಡುತ್ತಿಲ್ಲ, ಖಂಡನೆಯನ್ನೂ ಕೊಡುತ್ತಿಲ್ಲ . ಹೀಗೆ ವರ್ತನೆ ತೋರಿದಲ್ಲಿ ನಿಮ್ಮ ವಿರುದ್ಧವೂ ಪ್ರತಿಭಟನೆ ನಡೆಸುವ ಅನಿವಾರ್ಯತೆ ಎದುರಾಗಬಹುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಎಚ್ಚರಿಕೆ ನೀಡಿದರು.

ರಸ್ತೆ ಮಧ್ಯೆ ಕುಳಿತು ರಸ್ತೆ ತಡೆ ನಡೆಸಲು ಮುಂದಾದ ಕಾರ್ಯಕರ್ತರನ್ನು ಪೊಲೀಸರು ಎಬ್ಬಿಸಲು ಮುಂದಾದಾಗ ಪೋಲೀಸರೊಂದಿಗೆ ಕಾರ್ಯಕರ್ತರು ವಾಗ್ವಾದಕ್ಕಿಳಿದ ಘಟನೆಯೂ ನಡೆಯಿತು.



Join Whatsapp