ಇಂಡಿಯಾ ಒಕ್ಕೂಟದಲ್ಲಿ ಯಾವುದೇ ಹುದ್ದೆ ಬೇಡ: ಸಿಎಂ ನಿತೀಶ್ ಕುಮಾರ್

Prasthutha|

ನವದೆಹಲಿ: ಇಂಡಿಯಾ ಒಕ್ಕೂಟದಲ್ಲಿ ಯಾವುದೇ ಹುದ್ದೆ ಬೇಡ ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ.

- Advertisement -

ಈ ಕುರಿತು ಇಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ನಿತೀಶ್ ಕುಮಾರ್, ಇಂಡಿಯಾ ಒಕ್ಕೂಟದಲ್ಲಿ ಯಾವುದೇ ಹುದ್ದೆ ಹೊಂದಲು ಬಯಸುವುದಿಲ್ಲ. ಆದರೆ ಎಲ್ಲಾ ರಾಜ್ಯದಲ್ಲೂ ಆದಷ್ಟು ಬೇಗ ಸೀಟು ಹಂಚಿಕೆ ಸೂತ್ರವನ್ನು ಅಂತಿಮಗೊಳಿಸಬೇಕು ಎಂದು ಬಯಸುವುದಾಗಿ ಹೇಳಿದರು.

ನಾನು ಯಾವುದೇ ಹುದ್ದೆ ಬಯಸುವುದಿಲ್ಲ. ಬೇರೆ ಪಕ್ಷಗಳ ನಾಯಕರು ನನ್ನ ಬಗ್ಗೆ ಹೇಳಿಕೆ ನೀಡುತ್ತಾರೆ ಆದರೆ ನನಗೆ ಯಾವುದೇ ಹುದ್ದೆಯ ಆಸೆ ಇಲ್ಲ ಎಂದು ಮೊದಲಿನಿಂದಲೂ ಹೇಳುತ್ತಿದ್ದೇನೆ. ಎಲ್ಲಾ ರಾಜ್ಯಗಳಲ್ಲಿ ಸೀಟು ಹಂಚಿಕೆ ಸೂತ್ರವನ್ನು ಆದಷ್ಟು ಬೇಗ ಅಂತಿಮಗೊಳಿಸಬೇಕು ಎಂದು ಬಯಸುತ್ತೇನೆ ಎಂದು ಮಾಧ್ಯಮ ಸಂವಾದದಲ್ಲಿ ಹೇಳಿದರು.

Join Whatsapp