UAEಯಲ್ಲಿ ಇನ್ನು ಮುಂದೆ ಮಧ್ಯಾಹ್ನದ ವಿರಾಮ ಇಲ್ಲ!

Prasthutha|

ಅಬುಧಾಬಿ: ಯುಎಇಯಲ್ಲಿ ತೆರೆದ ಸ್ಥಳಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಮಧ್ಯಾಹ್ನದ ವಿರಾಮ ಇಂದಿಗೆ ಕೊನೆಗೊಳ್ಳಲಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯ ಘೋಷಿಸಿದೆ.

- Advertisement -

ಮಧ್ಯಾಹ್ನ 12.30 ರಿಂದ 3 ಗಂಟೆಯವರೆಗೆ ಇರುವ ವಿರಾಮವು ಜೂನ್ 15 ರಿಂದ ಸೆಪ್ಟೆಂಬರ್ 15 ರವರೆಗೆ ಮೂರು ತಿಂಗಳವರೆಗೆ ಜಾರಿಯಲ್ಲಿತ್ತು. ತೆರೆದ ಸ್ಥಳದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸುಡು ಬಿಸಿಲಿನ ಹೊಡೆತವನ್ನು ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು.

ಈ ನಿಯಮವನ್ನು ಯಾವುದೇ ಕಂಪನಿ ಉಲ್ಲಂಘಿಸಿದರೆ ಪ್ರತಿ ಕೆಲಸಗಾರನಿಗೆ 5,000 ದಿರ್ಹಂ ದಂಡ ವಿಧಿಸಲು ಆದೇಶಿಸಲಾಗಿತ್ತು.

Join Whatsapp