ಯಾವ ಶಾಸಕರೂ ಜೆಡಿಎಸ್​​ ಬಿಟ್ಟು ಹೋಗುವುದಿಲ್ಲ, ಬರೀ ಊಹಾಪೋಹ: ಹೆಚ್​ಡಿ ದೇವೇಗೌಡ ಸ್ಪಷ್ಟನೆ

Prasthutha|

ಬೆಂಗಳೂರು: ಯಾವ ಶಾಸಕರೂ ಜೆಡಿಎಸ್​​ ಬಿಟ್ಟು ಹೋಗುವುದಿಲ್ಲ. ಇದೆಲ್ಲ ಬರೀ ಊಹಾಪೋಹ ಅಷ್ಟೇ ಎಂದು ಪಕ್ಷಾಂತರ ವದಂತಿಗಳ ಬಗ್ಗೆ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ತಿಂಗಳು 10 ರಂದು ಒಂದು ಸಭೆ ನಡೆಸುತ್ತೇನೆ. ಅದಕ್ಕೆ ಎಲ್ಲಾ ಜಿಲ್ಲೆಗಳಿಂದ ಕಾರ್ಯಕರ್ತರು ಹಾಜರಾಗಲಿದ್ದಾರೆ ಎಂದರು. ಜತೆಗೆ, ಈ ತೊಂಭತ್ತೊಂದರ ವಯಸ್ಸಿನಲ್ಲಿ ಯಾರೂ ನನ್ನ ಕೈಬಿಡಬೇಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.