ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಡಿಕೆ ಶಿವಕುಮಾರ್ ಸೋಲಿಸ್ತಾರೆ : ಬಿಜೆಪಿ ವ್ಯಂಗ್ಯ

Prasthutha|

ಬೆಂಗಳೂರು : ಮುಂದಿನ ವಿಧಾನಸಭೆ ಚುನಾವಣೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪೂರ್ವ ತಯಾರಿ ನಡೆಸುತ್ತಿದ್ದು, ಕೋಲಾರದಿಂದ ಸ್ಪರ್ಧಿಸುವ ಸುಳಿವೊಂದನ್ನು ನೀಡಿದ್ದಾರೆ.

- Advertisement -

ಈ ಕುರಿತು ರಾಜ್ಯ ಬಿಜೆಪಿಯು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಕಾಲೆಳೆದಿದೆ.

‘ಸಿದ್ದರಾಮಯ್ಯ ಅವರೇ, ನೀವು ನಿಜವಾದ ಜನಪರ ನಾಯಕರಾದರೆ ಬಾದಾಮಿಯಿಂದಲೇ ಸ್ಪರ್ಧಿಸಿ ಆ ಜನರ ಋಣ ತೀರಿಸಿ. ಬಾದಾಮಿ ಮತದಾರರ ಮೇಲೆ ಅನುಮಾನ ಪಟ್ಟು ಅವರಿಗೆ ಅವಮಾನ ಮಾಡುತ್ತಿರುವುದು ಎಷ್ಟು ಸರಿ? ಎಂದು ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ.

- Advertisement -

ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕಳೆದ ಚುನಾವಣೆಯಲ್ಲಿ ಗೆಲ್ಲಿಸಿ ಮಾನ ಕಾಪಾಡಿದ ಬಾದಾಮಿ ಕ್ಷೇತ್ರದ ಜನತೆಗೆ ಕೈ ಕೊಡುವುದು ಜನನಾಯಕನ ಲಕ್ಷಣವೇ? ರಾಜಕೀಯ ಸಂದಿಗ್ಧ ಕಾಲದಲ್ಲಿ ಮಾನ ಕಾಪಾಡಿದ ಜನತೆಗಿಂತ ಮುಂದಿನ ಚುನಾವಣೆ ಗೆಲ್ಲುವುದೇ ಸಿದ್ದರಾಮಯ್ಯ ಅವರಿಗೆ ಮುಖ್ಯವಾಯಿತೇ?’ ಎಂದು ಹರಿಹಾಯ್ದಿದೆ.

‘ಮುಂದಿನ ಚುನಾವಣೆಗೆ ಕ್ಷೇತ್ರ ಹುಡುಕಲು ಇಷ್ಟೊಂದು ಕಸರತ್ತು ನಡೆಸುತ್ತಿರುವ ಪ್ರತಿಪಕ್ಷ ನಾಯಕ
ಸಿದ್ದರಾಮಯ್ಯ ಅವರ ಪರಿಸ್ಥಿತಿ ನೋಡಿದರೆ, ಯಾವ ಕ್ಷೇತ್ರದಲ್ಲಿ ನಿಂತರೂ ಅವರನ್ನು ಡಿಕೆಶಿ ಸೋಲಿಸುತ್ತಾರೆ ಎಂಬ ಭಯ ಕಾಡುತ್ತಿರುವ ಹಾಗಿದೆ’ ಎಂದು ವ್ಯಂಗ್ಯ ಮಾಡುವ ಮೂಲಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಟೀಕಿಸಿದೆ.

Join Whatsapp