ಸೌದಿ ಅರೇಬಿಯಾ: ಇಂಡಿಯನ್ ಓವರ್ಸಿಸ್ ಕಾಂಗ್ರೆಸ್ ಗೆ ಮೊದಲ ಕನ್ನಡಿಗ ಅಧ್ಯಕ್ಷ ಜಾವೇದ್ ಮಿಯಾಂದಾದ್

Prasthutha|

ಜಿದ್ದಾ: ಮೊದಲ ಬಾರಿಗೆ ಇಂಡಿಯನ್ ಓವರ್ಸಿಸ್ ಕಾಂಗ್ರೆಸ್ ಸೌದಿ ಅರೇಬಿಯಾ ಇದರ ಅಧ್ಯಕ್ಷರಾಗಿ ಕನ್ನಡಿಗರೊಬ್ಬರು ಆಯ್ಕೆಯಾಗಿದ್ದಾರೆ.

- Advertisement -

ಜಿದ್ದಾ ದಲ್ಲಿ ಕಾರ್ಪೊರೇಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕಲ್ಲಡ್ಕದ ಜಾವೇದ್ ಮಿಯಾಂದಾದ್ ಓವರ್ಸಿಸ್ ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷರಾಗಿದ್ದಾರೆ.

ಅವರು ಈ ಹಿಂದೆ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಹಿದಾಯ ಫೌಂಡೇಶನ್ ಜಿದ್ದಾ ಸೇರಿದಂತೆ ಇತರ ಹಲವು ಅನಿವಾಸಿ ಸಂಘಟನೆಗಳಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ. ಅವರು ಜಾಝಾ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

- Advertisement -

ಸಂಘಟನೆಯ ಅಧ್ಯಕ್ಷ ಆರ್ಷಿ ಮಲಿಕ್ ರವರು ಆರು ತಿಂಗಳುಗಳ ಕಾಲ ವಿದೇಶ ಪ್ರವಾಸದ ಲ್ಲಿರುವುದರಿಂದ ಜಾವೇದ್ ಮಿಯಾಂದಾದ್ ರವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.

Join Whatsapp