ನ.18 ಅಥವಾ 20ರಂದು ಪಂಚರತ್ನ ರಥಯಾತ್ರೆ ಪುನಾರಂಭ: ಕುಮಾರಸ್ವಾಮಿ

Prasthutha|

ಬೆಂಗಳೂರು: ಈ ತಿಂಗಳ 18 ಅಥವಾ 20ರಂದು ಪಂಚರತ್ನ ರಥಯಾತ್ರೆ ಮತ್ತೆ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದಿಂದಲೇ ಶುರು ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

- Advertisement -

ಪಕ್ಷದ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; ಈ ಎರಡು ದಿನದಲ್ಲಿ ಒಂದು ದಿನಾಂಕವನ್ನು ಇನ್ನೆರಡು ಮೂರು ದಿನದಲ್ಲಿ ನಿರ್ಧಾರ ಮಾಡುತ್ತೇವೆ ಎಂದು ಹೇಳಿದರು.

ಪಂಚರತ್ನ ರಥಯಾತ್ರೆ ಮಳೆಯಿಂದ ರದ್ದಾಗಿತ್ತು. ಪೂರ್ವ ನಿಗದಿತ ವೇಳಾಪಟ್ಟಿಯಂತೆ ಸೋಮವಾರದಿಂದ ಮತ್ತೆ ಪ್ರಾರಂಭ ಮಾಡಬೇಕಿತ್ತು. ಆದರೆ ಮತ್ತೆ ಮಳೆಯಾಗುತ್ತಿದೆ. ಮಳೆ ಇನ್ನೂ ಒಂದು ವಾರ ಇರುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪುನಾ ಮುಂದಕ್ಕೆ ಹಾಕಿದ್ದೇವೆ ಎಂದು ಅವರು ತಿಳಿಸಿದರು.

- Advertisement -

ನವೆಂಬರ್ 18 ಇಲ್ಲವೇ 20ಕ್ಕೆ ಆರಂಭ ಆಗಲಿರುವ ಪಂಚರತ್ನ ರಥಯಾತ್ರೆ ಡಿಸೆಂಬರ್ 29ರ ವೆರೆಗೆ ನಡೆಯಲಿದೆ. ಜನವರಿ 3ರಿಂದ ಕಲ್ಯಾಣ ಕರ್ನಾಟಕದಿಂದ ಪ್ರಾರಂಭ ಆಗಲಿದೆ. ಅಲ್ಲಿಂದ ಮೈಸೂರಿಗೆ ಬರುವ ತನಕ ಮುಂದುವರೆಸುತ್ತೇವೆ. ಒಟ್ಟು ಲಭ್ಯ ಅವಧಿಯೊಳಗೆ 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮಾರ್ಚ್ ಒಳಗೆ ಯಾತ್ರೆಯನ್ನು ಮುಗಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

Join Whatsapp