ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಇಲ್ಲ : ವಿರೋಧಿ ನಿರ್ಣಯ ಮಂಡಿಸಿದ ಅಮೆರಿಕ ಸಂಸದೆ

Prasthutha|

ವಾಷಿಂಗ್ಟನ್: ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಆಗುತ್ತಿದೆ ಎಂದು ಭಾರತ  ಡೆಮಾಕ್ರಟಿಕ್ ಸಂಸದೆ ಇಲ್ಹಾನ್ ಒಮರ್ ಅವರು ಆರೋಪಿಸಿದ್ದು, ಇದಕ್ಕೆ ಸಂಬಂಧಿಸಿದ ವಿರೋಧಿ  ನಿರ್ಣಯವೊಂದನ್ನು ಸಂಸತ್ ನಲ್ಲಿ ಮಂಡಿಸಿದ್ದಾರೆ. ಮತ್ತು

- Advertisement -

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮಂಡಿಸಲಾದ ಈ ನಿರ್ಣಯವನ್ನು ಅಗತ್ಯ ಕ್ರಮಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಮಿತಿಗೆ ರವಾಣಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾರತಕ್ಕೆ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯಾಗುತ್ತಿರುವ ದೇಶವೆಂಬ ಹಣೆಪಟ್ಟಿ ಹಚ್ಚುವಂತೆ ಅವರು ಅಮೆರಿಕ ವಿದೇಶಾಂಗ ಇಲಾಖೆಯನ್ನು ಒತ್ತಾಯಿಸಿದ್ದಾರೆ.

- Advertisement -

ಸಂಸದೆಯರಾದ ರಶೀದಾ ತಾಲಿಬ್ ಮತ್ತು ಜುವಾನ್ ರ್ಗಾಸ್ ಅವರು ಸಹ ಬೆಂಬಲಿಸಿರುವ ಈ ನಿರ್ಣಯದಲ್ಲಿ ಸತತ ಮೂರು ರ್ಷಗಳವರೆಗೆ ಭಾರತವನ್ನು ಧರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಯಾಗುತ್ತಿರುವ ದೇಶವೆಂದು ಪರಿಗಣಿಸಲು ಬೈಡನ್ ಆಡಳಿತವನ್ನು ಒತ್ತಾಯಿಸಲಾಗಿದೆ.



Join Whatsapp