‘ಕಾಂಗ್ರೆಸ್‌ಗೆ ಹಿಂದೂ ದೇವರುಗಳು ಬೇಕಾಗಿಲ್ಲ’ – ಪಠ್ಯಪುಸ್ತಕ ವಿವಾದದ ವಿರುದ್ಧ ಆರ್ ಅಶೋಕ್ ಕಿಡಿ

Prasthutha|

ಬೆಂಗಳೂರು: ‘ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಪಠ್ಯಪುಸ್ತಕದ ಪಠ್ಯಕ್ರಮವನ್ನು ಅಲ್ಪಸಂಖ್ಯಾತರನ್ನು ಓಲೈಸುವ ಸಲುವಾಗಿ ತಮಗಿಷ್ಟ ಬಂದಹಾಗೆ ಬದಲಾಯಿಸಿದೆ’ ಎಂದು ಪಠ್ಯಪುಸ್ತಕ ಪರಿಷ್ಕರಣೆಯ ವಿವಾದದ ಕುರಿತು ಕಾಂಗ್ರೆಸ್ ವಿರುದ್ಧ ಕಂದಾಯ ಸಚಿವ, ಬಿಜೆಪಿ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.

- Advertisement -

ಆರ್ ಅಶೋಕ್ ಮಾತನಾಡಿ ‘ಕಾಂಗ್ರೆಸ್‌ ಪಕ್ಷಕ್ಕೆ ಪಠ್ಯಕ್ರಮದಲ್ಲಿ ಹಿಂದೂ ದೇವರುಗಳು, ನೈಜ ಸ್ವಾತಂತ್ರ್ಯ ಹೋರಾಟಗಾರರ ಅಳವಡಿಸುವಿಕೆ ಬೇಕಾಗಿಲ್ಲ. ಅನಗತ್ಯವಾಗಿ ಇಲ್ಲಸಲ್ಲದ ವಿವಾದಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮುಂದಕ್ಕೆ ಮಾತನಾಡಿದ ಅವರು ‘ ಪಠ್ಯಪುಸ್ತಕದಲ್ಲಿ ‘ಹಿಂದೂ’ ಎಂಬ ಪದವನ್ನು ಅಳಿಸಿ ಹಾಕಲು ಕಾಂಗ್ರೆಸ್ ಬಯಸಿದೆ. ಅದಕ್ಕಾಗಿಯೇ ಪಠ್ಯಕ್ರಮದಿಂದ ಶ್ರೀರಾಮ ಮತ್ತು ಶಿವನ ಹೆಸರನ್ನು ತೆಗೆದುಹಾಕಲು ಕಾಂಗ್ರೆಸ್ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯನ್ನು ರಚಿಸಿದೆ’ ಎಂದು ಕಾಂಗ್ರೆಸ್ ಕಾಲೆಳೆದಿದ್ದಾರೆ.

Join Whatsapp