ಇಂದಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ ವ್ಯವಸ್ಥೆ
Prasthutha: June 24, 2022

ಮಂಗಳೂರು: ಅಂತ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಂಗಳೂರು ನಗರದಿಂದ ಬಸ್ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಸಾರಿಗೆ ಸಚಿವ ಶ್ರೀ ರಾಮುಲು ಪ್ರಕಟಿಸಿದ್ದಾರೆ.
ಬಜ್ಪೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ನಗರದಿಂದ ಬಸ್ ವ್ಯವಸ್ಥೆ ಇಲ್ಲ ಎಂದು ಪತ್ರಕರ್ತರು ಎಚ್ಚರಿಸಿದ್ದು, ನಗರದಿಂದ 15 ಕಿಮೀ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ 700-800 ರೂ ಕ್ಯಾಬ್ ಗೆ ಕೊಡಬೇಕಾಗಿ ಬರುತ್ತದೆ ಎಂದು ಕೂಡಾ ಪತ್ರಕರ್ತರು ರಾಮುಲು ಅವರಿಗೆ ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರಾಮುಲು, ಸಾರಿಗೆ ಕಾರ್ಯದರ್ಶಿ ಎನ್.ವಿ.ಪ್ರಸಾದ್ ಅವರಿಗೆ ಕರೆಮಾಡಿ ಇಂದು ಸಂಜೆ ವೇಳೆ ಜಾರಿಯಾಗುವಂತೆ ಆದೇಶ ಹೊರಡಿಸಲು ನಿರ್ದೇಶಿಸಿದರು. ಮತ್ತು ಸಂಜೆಯೊಳಗೆ ತನಗೆ ಈ ಬಗ್ಗೆ ವರದಿ ನೀಡಬೇಕೆಂದೂ ತಿಳಿಸಿದ್ದಾರೆ
