ಕೇಂದ್ರ ಬಜೆಟ್: ಆದಾಯ ಮಿತಿ ಏರಿಕೆ, ತೆರಿಗೆ ಇಳಿಕೆ

Prasthutha|

ನವದೆಹಲಿ: ಕೇಂದ್ರದ ಬಜೆಟ್’ನಲ್ಲಿ ಆದಾಯ ಮಿತಿಯನ್ನು ರೂ. 7 ಲಕ್ಷಕ್ಕೆ ಏರಿಸಿದ್ದು, ಅಲ್ಲಿಯವರೆಗೆ ಇನ್ನು ತೆರಿಗೆ ಕಟ್ಟಬೇಕಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

- Advertisement -


ಬುಧವಾರ ಲೋಕಸಭೆಯಲ್ಲಿ 2023ನೇ ಸಾಲಿನ ಬಜೆಟ್ ಮಂಡಿಸಿ ಭಾಷಣ ಮಾಡಿದ ಅವರು, ಒಬ್ಬ ವ್ಯಕ್ತಿಯು 15 ಲಕ್ಷ ರೂಪಾಯಿ ವಾರ್ಷಿಕ ಆದಾಯ ಹೊಂದಿದ್ದರೆ ಹೊಸ ನಿಯಮದಂತೆ 1.5 ಲಕ್ಷ ತೆರಿಗೆ ಕಟ್ಟಬೇಕು. ಹಿಂದಿನ ನಿಯಮದಂತೆ 1.87 ಲಕ್ಷ ಕಟ್ಟಬೇಕಿತ್ತು. ವಾರ್ಷಿಕ 15 ಲಕ್ಷ ರೂಪಾಯಿಗಿಂತ ಹೆಚ್ಚು ಆದಾಯ ಇರುವವರು 30% ತೆರಿಗೆ ಕಟ್ಟಬೇಕು ಎಂದು ಚುನಾವಣಾ ಕಾಲದ ಬಜೆಟ್ ವಿಶೇಷವನ್ನು ನಿರ್ಮಲಾ ವಿವರಿಸಿದರು.


ಮೂರು ವರ್ಷಗಳ ಸಾಂಕ್ರಾಮಿಕ ಕೋವಿಡ್ ಎಲ್ಲ ದೇಶಗಳ ಆದಾಯವನ್ನು ಕುಸಿಯುವಂತೆ ಮಾಡಿದ್ದು, ನಾವು ಬೇಗ ಎದ್ದು ನಿಂತಿದ್ದೇವೆ ಎಂದೂ ಅವರು ಹೇಳಿದರು. ಇದು ನಿರ್ಮಲಾ ಸೀತಾರಾಮನ್ ಮಂಡಿಸಿದ ಆರನೆಯ ಬಜೆಟ್ ಆಗಿದೆ.

Join Whatsapp