ಅಮರಾವತಿ: ರಾಜ್ಯದ ವಿವಿಧ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು PFI ಸದಸ್ಯರ ಮನೆ ಮೇಲೆ ಇಂದು ದಾಳಿ ನಡೆಸಿದ್ದಾರೆ.
ತೆಲಂಗಾಣದ ನಿಝಾಮಾಬಾದ್ ಜಿಲ್ಲೆಯ ಮನೆಯೊಂದರ ಮೇಲೆಯೂ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದು,ನಾಳೆ ಹೈದರಾಬಾದ್ ನಲ್ಲಿರುವ NIA ಕಚೇರಿಗೆ ಹಾಜರಾಗುವಂತೆ ವ್ಯಕ್ತಿಯೊಬ್ಬರಿಗೆ ನೋಟಿಸ್ ನೀಡಿದ್ದಾರೆ.
NIA ಅಧಿಕಾರಿಗಳ 23 ತಂಡಗಳು ನಿಝಾಮಾಬಾದ್, ಕರ್ನೂಲ್, ಗುಂಟೂರು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿವೆ.
ಶೋಧದ ವೇಳೆ ಅಧಿಕಾರಿಗಳು ಈಗಾಗಲೇ PFI ಜಿಲ್ಲಾ ಸಂಚಾಲಕ ಶಾದುಲ್ಲಾ ಮತ್ತು ಸದಸ್ಯರಾದ ಮುಹಮ್ಮದ್ ಇಮ್ರಾನ್ ಮತ್ತು ಮುಹಮ್ಮದ್ ಅಬ್ದುಲ್ ಮುಬೀನ್ ಅವರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಕರಾಟೆ ಕಲಿಸುವ ನೆಪದಲ್ಲಿ ಹಿಂಸಾಚಾರ ಮತ್ತು ಕಾನೂನುಬಾಹಿರ ತರಬೇತಿಗೆ ಪ್ರಚೋದನೆ ನೀಡಿದ ಅರೋಪ ಹೊರಿಸಲಾಗಿದೆ.