SDPI ಉಡುಪಿ ಜಿಲ್ಲಾ ಸಮಿತಿಗೆ ನೂತನ ಸಾರಥ್ಯ

Prasthutha|

ಉಡುಪಿ: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಸಮಿತಿಗೆ 2022-24ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಇಂದು ನಡೆಯಿತು.

- Advertisement -

ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲಾ ಜೋಕಟ್ಟೆ ಚುನಾವಣಾ ಪ್ರಕ್ರಿಯೆ ನೆರವೇರಿಸಿಕೊಟ್ಟರು. ಜಿಲ್ಲಾಧ್ಯಕ್ಷರಾಗಿ. B N ಶಾಹಿದ್ ಅಲಿ, ಉಪಾಧ್ಯಕ್ಷರಾಗಿ P ಖಲೀಲ್ ಅಹ್ಮದ್, ಮತ್ತು ಪ್ರ.ಕಾರ್ಯದರ್ಶಿಯಾಗಿ ಮುಹಮ್ಮದ್ ಅಶ್ರಫ್ ಬಾವ ಆಯ್ಕೆಯಾದರು.

ಜಿಲ್ಲಾ ಕಾರ್ಯದರ್ಶಿಗಳಾಗಿ ಅಬ್ದುಲ್ ಮಜೀದ್ ಉಚ್ಚಿಲ ಹಾಗೂ ಅಬ್ದುಲ್ ವಾಹಿದ್ ಆಯ್ಕೆ ಮಾಡಲಾಯಿತು. ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಮಲ್ಪೆ ಆಯ್ಕೆಗೊಂಡರು.

Join Whatsapp