ತೈವಾನ್‌ನಲ್ಲಿ ಭಾರೀ ಭೂಕಂಪ: ಸುನಾಮಿಯ ಎಚ್ಚರಿಕೆ ನೀಡಿದ ತಜ್ಞರು

Prasthutha|

ತೈಪೈ: ತೈವಾನ್ ದಕ್ಷಿಣ ಭಾಗದಲ್ಲಿ ತೀವ್ರ ಭೂ ಕಂಪನ ಉಂಟಾಗಿದ್ದು, ಮುಂದಿನ‌ ದಿನಗಳಲ್ಲಿ ಸುನಾಮಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಮುನ್ಸೂಚನೆ ನೀಡಿದ್ದಾರೆ.

- Advertisement -

6.8 ಪರಿಮಾಣದಲ್ಲಿ ಕಂಪನ ಉಂಟಾಗಿದ್ದು, ಒಂದು ಕಟ್ಟಡ ಕುಸಿದಿದೆ. ಇಲ್ಲಿನ ದೋಂಗ್ಲಿ ಬಳಿಯ ರೈಲು ನಿಲ್ದಾಣವೊಂದು ಭಾಗಶಃ ಕುಸಿದಿದ್ದು, ರೈಲೊಂದರ ಮೂರು ಭೋಗಿಗಳು ಬೇರ್ಪಟ್ಟಿದೆ.

ಕರಾವಳಿಗೆ ಸಮಾನಾಂತರವಾಗಿ ಭೂಕಂಪದ ಕೇಂದ್ರದಿಂದ 300 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುನಾಮಿ ಅಲೆಗಳು ಎದ್ದೇಳುವ ಸಾಧ್ಯತೆಯಿದೆ ಎಂದು ‘ಯುಎಸ್ ಸುನಾಮಿ ಎಚ್ಚರಿಕೆ ಕೇಂದ್ರ’ ತಿಳಿಸಿದೆ.

Join Whatsapp