ಮಂಗಳೂರಿನಲ್ಲಿ ಎಸ್ ಡಿಪಿಐ ಕಚೇರಿಯ ಬಾಗಿಲು ಮುರಿದ NIA ಅಧಿಕಾರಿಗಳು

Prasthutha|

ಮಂಗಳೂರು: ದೇಶದ ಹಲವು ರಾಜ್ಯಗಳಲ್ಲಿ ದಾಳಿ ನಡೆಸಿರುವ ಎನ್ ಐಎ ಅಧಿಕಾರಿಗಳು ಇಂದು ನಗರದ ಎಸ್ ಡಿಪಿಐ ಕಚೇರಿಯ ಬಾಗಿಲು ಮುರಿದು ಒಳಗೆ ನುಗ್ಗಿ ಪರಿಶೀಲನೆ ನಡೆಸಿದ್ದಾರೆ.


ಎನ್ ಐಎ ಅಧಿಕಾರಿಗಳು ಎಸ್ ಡಿಪಿಐ ಕಚೇರಿಯ ಬೀಗವನ್ನು ಬ್ಲೇಡ್ ನಿಂದ ಕಟ್ ಮಾಡಿ ಕಚೇರಿಯ ಶಟರ್ ತೆರೆದಿದ್ದಾರೆ. ಇದಲ್ಲದೇ ಅಧಿಕಾರಿಗಳು ಒಳಭಾಗದ ಡೋರ್ ನ ಗಾಜನ್ನು ಪುಡಿ ಮಾಡಿದ್ದಾರೆ. ಮಂಗಳೂರಿನ ಕಚೇರಿಯೊಳಗೆ ನುಗ್ಗಿದ ಎನ್ ಐಎ ಅಧಿಕಾರಿಗಳು ಅಲ್ಲಿ ಹಲವು ಮಹತ್ವದ ದಾಖಲೆಗಳು ಕಂಪ್ಯೂಟರ್ ಸಿಪಿಯುನ ಹಾರ್ಡ್ ಡಿಸ್ಕ್ ಅನ್ನು ವಶಕ್ಕೆ ಪಡೆದಿದ್ದಾರೆ.

- Advertisement -


ಈ ಬಗ್ಗೆ ಎಸ್ ಡಿಪಿಐ ರಾಜ್ಯ ಮುಖಂಡರೊಬ್ಬರು ಮಾತನಾಡಿ, ದಾಳಿ ಮಾಡುವ ಸಂದರ್ಭದಲ್ಲಿ ಕಚೇರಿಯಲ್ಲಿ ಸಿಬ್ಬಂದಿಯಿದ್ದ. ಆತ ಎನ್ ಐಎ ಅಧಿಕಾರಿಗಳ ಬಳಿ ಪ್ರಶ್ನಿಸುವ ಮೊದಲೇ ಕಚೇರಿಯ ಬೀಗವನ್ನು ಒಡೆದು ನುಗ್ಗಿದ್ದಾರೆ. ಒಂದು ರೀತಿಯ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಈ ರೀತಿಯ ಘಟನೆಯನ್ನು ಎಸ್ ಡಿಪಿಐ ಖಂಡಿಸುತ್ತೇವೆ ಎಂದರು.

- Advertisement -