ಬಿಜೆಪಿ ಪಿತೂರಿಯಿಂದ SDPI ದ.ಕ ಜಿಲ್ಲಾ ಕಚೇರಿಗೆ ದಾಳಿ: ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ

Prasthutha|

ಮಂಗಳೂರು: ಬಿಜೆಪಿ ಸರ್ಕಾರದ ಪಿತೂರಿ ಮತ್ತು ಷಡ್ಯಂತ್ರದಿಂದಾಗಿ SDPI ದ.ಕ ಜಿಲ್ಲಾ ಸಮಿತಿಯ ಕಚೇರಿಯ ಮೇಲೆ NIA ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿ.ಎಫ್.ಐ ಕಚೇರಿಯನ್ನು ಶೋಧಿಸುವ ಸಲುವಾಗಿ NIA ಅಧಿಕಾರಿಗಳು ವಾರೆಂಟ್’ನೊಂದಿಗೆ ತಪ್ಪಾಗಿ SDPI ಕಚೇರಿಗೆ ದಾಳಿ ನಡೆಸಿದ್ದಾರೆ. ಈ ಕುರಿತು NIA ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈ ವೇಳೆ PFI ಮತ್ತು SDPI ಕಚೇರಿಯಲ್ಲಿ ಶೋಧ ನಡೆಸಿದ್ದಾರೆ ಎಂದು ತಿಳಿಸಿದರು.

- Advertisement -

ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ಪಕ್ಷದ ಕೆಲವು ಕಾರ್ಯಕ್ರಮದ ಸಿಡಿಗಳು, ಫೋಟೋಗಳು, ಬಾಡಿಗೆ ಕರಾರು ಪತ್ರ, ದೈನಂದಿನ ಬಳಸುವ ಲ್ಯಾಪ್’ಟ್ಯಾಪ್ ಸಹಿತ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪಕ್ಷದ ಯಾವುದೇ ನಾಯಕರನ್ನು ವಿಚಾರಣೆ ನಡೆಸಿಲ್ಲ ಎಂದು ತಿಳಿಸಿದರು.

ಪಕ್ಷದ ಕಚೇರಿಯ ಬೀಗ ಮುರಿದು, ಅಳವಡಿಸಿದ್ದ ಗಾಜನ್ನು ಪುಡಿಗೈದು NIA ಅಧಿಕಾರಿಗಳು ಒಳನುಗ್ಗಿದ್ದಾರೆ ಎಂದು SDPI ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -