ಹೆರಿಗೆಯಾದ 2 ಗಂಟೆಯಲ್ಲಿ ನವಜಾತ ಶಿಶು ನಾಪತ್ತೆ: ಪೋಷಕರ ಆಕ್ರೋಶ

Prasthutha|

ದಾವಣಗೆರೆ: ಹೆರಿಗೆಯಾದ 2 ಗಂಟೆಯಲ್ಲೇ ನವಜಾತ ಶಿಶು ಆಸ್ಪತ್ರೆಯಿಂದ ನಾಪತ್ತೆಯಾದ ಘಟನೆ ನಗರದ ಚಾಮರಾಜಪೇಟೆ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಾರ್ಚ್ 16 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

- Advertisement -

ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಉಮ್ಮು ಸಲ್ಮಾ ಹಾಗೂ ಇಸ್ಮಾಯಿಲ್ ಜಬೀವುಲ್ಲಾ ದಂಪತಿಯ ಮೊದಲ ಮಗು ಇದಾಗಿದ್ದು, ಜನಿಸಿ 2 ಗಂಟೆಯ ಬಳಿಕ ಗ೦ಡು ಮಗು ಎಲ್ಲರ ಸಮ್ಮುಖದಲ್ಲೇ ನಾಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಮಗು ಕೊಡುವವರೆಗೂ ನಾವು ಜಾಗ ಬಿಟ್ಟು ಕದಲುವುದಿಲ್ಲ ಎಂದು ಪೋಷಕರು ಮತ್ತು ಸಂಬಂಧಿಕರು ಅಸತ್ರೆಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದಾರೆ.

Join Whatsapp