ನ್ಯೂಝಿಲ್ಯಾಂಡ್ ಸಂಸದರಾಗಿ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಭಾರತೀಯ ಮೂಲದ ಡಾ. ಗೌರವ್ ಶರ್ಮಾ

Prasthutha|

ಔಕ್ಲಾಂಡ್ : ನ್ಯೂಝಿಲ್ಯಾಂಡ್ ನೂತನ ಸಂಸತ್ತಿನಲ್ಲಿ ಭಾರತೀಯ ಮೂಲದ ಸಂಸದ ಡಾ. ಗೌರವ್ ಶರ್ಮಾ ಸಂಸದರಾಗಿ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿ ಸುದ್ದಿಯಾಗಿದ್ದಾರೆ.

- Advertisement -

ಹ್ಯಾಮಿಲ್ಟನ್ ವೆಸ್ಟ್ ಕ್ಷೇತ್ರದಿಂದ ಲೇಬರ್ ಪಾರ್ಟಿಯಿಂದ ಶರ್ಮಾ ಆಯ್ಕೆಯಾಗಿದ್ದಾರೆ. ನ್ಯೂಝಿಲ್ಯಾಂಡ್ ಸಂಸತ್ತಿಗೆ ಆಯ್ಕೆಯಾದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಯನ್ನೂ ಅವರು ಹೊಂದಿದ್ದಾರೆ.

ಡಾ. ಶರ್ಮಾ ಅವರು ಮೊದಲು ನ್ಯೂಝಿಲ್ಯಾಂಡ್ ನ ಮಾತೃಭಾಷೆ ಮಾವೊರಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು ಎಂದು ವರದಿಯೊಂದು ತಿಳಿಸಿದೆ.



Join Whatsapp