ಜನತೆಗೆ ಮತ್ತೊಂದು ಶಾಕ್ | 1ತಿಂಗಳಲ್ಲೇ ಎಲ್‌ಪಿಜಿ ಸಿಲಿಂಡರ್ ದರ 100ರೂ. ಏರಿಕೆ!

Prasthutha|

ಹೊಸದಿಲ್ಲಿ : ಎಲ್​ಪಿಜಿ ಸಿಲಿಂಡರ್​, ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಏರಿಕೆಯಾಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವಾಗಲೇ ಇದೀಗ ಮತ್ತೊಮ್ಮೆ ಎಲ್​ಪಿಜಿ ಸಿಲಿಂಡರ್​ ದರ ಏರಿಕೆಯಾಗಿದೆ. ಫೆಬ್ರವರಿ ಒಂದೇ ತಿಂಗಳಲ್ಲಿ ಎಲ್​ಪಿಜಿ ದರದಲ್ಲಿ 100 ರೂಪಾಯಿ ಏರಿಕೆಯಾಗಿದೆ.

- Advertisement -

14.2 ಕೆಜಿ ಸಿಲಿಂಡರ್​ ದರದಲ್ಲಿ 25 ರೂಪಾಯಿ ಏರಿಕೆಯಾಗಿದೆ. ಈ ಹಿಂದೆ ಫೆಬ್ರವರಿ 4ರಂದು 25 ರೂಪಾಯಿ ಹಾಗೂ ಫೆಬ್ರವರಿ 15ರಂದು 50 ರೂಪಾಯಿ ಏರಿಕೆಯಾಗಿತ್ತು. ಇದೀಗ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 14.2 ಕೆಜಿ ಸಿಲಿಂಡರ್​ ದರ 794 ರೂಪಾಯಿಯಾಗಿದೆ. ಕೋಲ್ಕತ್ತದಲ್ಲಿ 820 ರೂಪಾಯಿ, ಮುಂಬೈನಲ್ಲಿ 794 ರೂಪಾಯಿ, ಚೆನ್ನೈನಲ್ಲಿ 810 ರೂಪಾಯಿ ಮತ್ತು ಹೈದರಾಬಾದ್​ನಲ್ಲಿ 846.50 ರೂಪಾಯಿಗೆ ಏರಿಕೆಯಾಗಿದೆ.

ಡಿಸೆಂಬರ್​ನಲ್ಲೂ ಎಲ್​ಪಿಜಿ ಸಿಲಿಂಡರ್​ ದರ 100 ರೂಪಾಯಿ ಏರಿಕೆಯಾಗಿತ್ತು. ಎರಡು ಬಾರಿ 50 ರೂಪಾಯಿಯಂತೆ ಏರಿಕೆ ಮಾಡಲಾಗಿತ್ತು. ಇನ್ನೊಂದು ಕಡೆ ಪೆಟ್ರೋಲ್​ ಬೆಲೆಯಲ್ಲೂ ಭಾರಿ ಏರಿಕೆ ಕಾಣುತ್ತಿದೆ. ಪ್ರತಿ ದಿನ ಪೈಸೆ ಲೆಕ್ಕದಲ್ಲಿ ಏರಿಕೆಯಾಗುತ್ತಿದ್ದು, ಹಲವು ರಾಜ್ಯಗಳಲ್ಲಿ ಒಂದು ಲೀಟರ್​ ಪೆಟ್ರೋಲ್​ ದರ 100 ರೂಪಾಯಿಯ ಗಡಿ ದಾಟುವ ಹಂತದಲ್ಲಿದೆ.

- Advertisement -