ಉಳ್ಳಾಲದಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ನೂತನ ಘಟಕ ಅಸ್ತಿತ್ವಕ್ಕೆ

Prasthutha|

ಮಂಗಳೂರು: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂನ ಉಳ್ಳಾಲ ನೂತನ ಘಟಕ ಅಸ್ತಿತ್ವಕ್ಕೆ ಬಂದಿದೆ. ಇತ್ತೀಚೆಗೆ ಉಳ್ಳಾಲ ಮಾಸ್ತಿಕಟ್ಟೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂನ ಉಳ್ಳಾಲ ಘಟಕದ ಹೊಸ ಪದಾಧಿಕಾರಿಗಳ ಸಮಿತಿ ರಚನೆಯಾಯಿತು.

ನೂತನ ಘಟಕದ ಗೌರವಾಧ್ಯಕ್ಷರಾಗಿ ಇಸ್ಮಾಯಿಲ್, ಅಧ್ಯಕ್ಷರಾಗಿ ತನ್ವೀರ್, ಉಪಾಧ್ಯಕ್ಷರಾಗಿ ಅಲ್ತಾಫ್ ಉಳ್ಳಾಲ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಇಮ್ತಿಯಾಝ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳಾಗಿ ಇಮ್ತಿಯಾಝ್ ಮುಕ್ಕಚ್ಚೇರಿ, ಜೊತೆ ಕಾರ್ಯದರ್ಶಿಯಾಗಿ ಸತ್ತಾರ್ ಹಳೇಕಲ, ಕೋಶಾಧಿಕಾರಿಯಾಗಿ ಪೈರೊಝ್ ಆಯ್ಕೆಯಾದರು.

- Advertisement -

ಇದೇ ವೇಳೆ ನೂತನ ಸಮಿತಿ ಸದಸ್ಯರುಗಳಾಗಿ ಕಲೀಲ್, ತ್ವಾಹ, ಸಂಶುದ್ದೀನ್, ಸುಹೈಲ್ ಉಳ್ಳಾಲ,ಬದ್ರುದ್ದೀನ್ ಮುಕ್ಕಚ್ಚೇರಿ, ಕಲೀಲ್, ನಾಸಿರ್ ಗ್ಯಾರೆಜ್, ಅಬೂಬಕ್ಕರ್, ಮುನ್ನ, ಅಝ್ಗರ್, ರಮೀಝ್, ಜಮಾಲ್, ಸಮೀರ್ ಅಳೇಕಲ, ಅರ್ಶಾದ್ ಗ್ಯಾರೆಜ್, ಮತ್ತು ಉಮ್ಮರ್ ಕುಂಞ ಆಯ್ಕೆಯಾದರು.

- Advertisement -