ತ್ರಿಪುರಾದಲ್ಲಿ ಮುಸ್ಲಿಮರ ವಿರುದ್ಧ ಹಿಂದುತ್ವದ ದಾಳಿಗೆ ಪಾಪ್ಯುಲರ್ ಫ್ರಂಟ್ ತೀವ್ರ ಖಂಡನೆ

Prasthutha|

ನವದೆಹಲಿ: ತ್ರಿಪುರಾದ ವಿವಿಧ ಭಾಗಗಳಲ್ಲಿ ಮುಸ್ಲಿಮರ ಮಸೀದಿಗಳು ಮತ್ತು ಆಸ್ತಿಗಳ ಮೇಲೆ ನಡೆಯುತ್ತಿರುವ ಹಿಂದುತ್ವ ಸಂಘಟನೆಗಳ ದಾಳಿಗಳನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈಶಾನ್ಯ ವಲಯದ ಅಧ್ಯಕ್ಷ ಮುಹಮ್ಮದ್ ಆರಿಫ್ ಖಾನ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆರ್ ಎಸ್ ಎಸ್, ವಿಎಚ್ ಪಿ ಮತ್ತು ಬಜರಂಗದಳದಂತಹ ಬಲಪಂಥೀಯ ಗುಂಪುಗಳು ಈಶಾನ್ಯ ಪ್ರದೇಶದ ಅಲ್ಪಸಂಖ್ಯಾತ ಮುಸ್ಲಿಮರನ್ನು ಬಾಂಗ್ಲಾದೇಶಿ ನುಸುಳುಕೋರರು ಎಂಬ ಸುಳ್ಳಾರೋಪ ಹೊರಿಸಿ ಅವರನ್ನು ಹಿಂಸಿಸುವಲ್ಲಿ ಕುಖ್ಯಾತವಾಗಿವೆ. ಪ್ರಸಕ್ತ ಅವರು ಈಗ ಬಾಂಗ್ಲಾದೇಶದಲ್ಲಿ ನಡೆದ ಅಲ್ಪಸಂಖ್ಯಾತ ವಿರೋಧಿ ಹಿಂಸಾಚಾರದ ವಿರುದ್ಧದ ಪ್ರತಿಭಟನೆಯ ನೆಪದಲ್ಲಿ ಈ ರೀತಿಯ ದುಷ್ಕೃತ್ಯವನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.

ನೆರೆಯ ರಾಷ್ಟ್ರ ಸೇರಿದಂತೆ ಯಾವುದೇ ಭಾಗದಲ್ಲಿ ಅಲ್ಪಸಂಖ್ಯಾತರನ್ನು ಕೆಟ್ಟದಾಗಿ ನಡೆಸುವುದು ಸರಿಯಲ್ಲ. ಅದೇ ರೀತಿ ಸ್ವಂತ ದೇಶದಲ್ಲಿ ಅಲ್ಪಸಂಖ್ಯಾತದ ವಿರುದ್ಧದ ಹಿಂಸಾತ್ಮಕ ದುಷ್ಕೃತ್ಯಗಳ ಬಗ್ಗೆ ಮೌನವಹಿಸುವುದು ಕೂಡ ಸರಿಯಲ್ಲ. ಪ್ರಸ್ತುತ ಇಲ್ಲಿ ನಡೆಯುತ್ತಿರುವ ಮುಸ್ಲಿಮರ ಮೇಲಿನ ದಾಳಿಯನ್ನು ಖಂಡಿಸುವ ನಿಟ್ಟಿನಲ್ಲಿ ತ್ರಿಪುರಾದ ನಾಗರಿಕ ಸಮಾಜ ಮುಂದೆ ಬರಬೇಕು.

- Advertisement -

ಹಿಂದುತ್ವ ಸಂಘಟನೆಗಳ ಗೂಂಡಾಗಳ ವಿರುದ್ಧ ತಕ್ಷಣದ ಕ್ರಮಗಳನ್ನು ಖಾತ್ರಿಪಡಿಸುವ ಮೂಲಕ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಬೇಕು. ಹಿಂಸಾಚಾರದ ಹಿಂದಿರುವ ನೈಜ ಸೂತ್ರಧಾರರು ಮತ್ತು ಪ್ರಚೋದಕರನ್ನು ನ್ಯಾಯಾಲಯದ ಎದುರು ತಂದು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

Join Whatsapp