ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾ ಪೋಲೀಸರಿಗೆ ಶರಣು

Prasthutha|

ತಮಿಳುನಾಡು: ಚಿಕ್ಕಮಗಳೂರು. ಪಶ್ಚಿಮ ಘಟ್ಟದ ಮಲೆನಾಡು ಭಾಗದಲ್ಲಿ ನಕ್ಸಲ್ ನಾಯಕಿಯಾಗಿ ಗುರುತಿಸಿಕೊಂಡಿದ್ದ  ಹೊಸಗದ್ದೆ ಪ್ರಭಾ ತಮಿಳುನಾಡಿನ ವೇಲೂರು ಪೊಲೀಸರಿಗೆ ಶರಣಾಗಿದ್ದಾರೆ. ಹನ್ನೊಂದು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾಳೆ ಎನ್ನಲಾಗಿದ್ದ ಪ್ರಭಾ ಇದೀಗ ತಮಿಳುನಾಡು ಪೊಲೀಸರಿಗೆ ಶರಣಾಗತಿಯಾಗಿದ್ದಾಳೆ.

- Advertisement -

ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆ ಸೇರಿ ಹಲವೆಡೆ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ  ಹೊಸಗದ್ದೆ ಪ್ರಭಾ ವಿರುದ್ಧ ಶೃಂಗೇರಿ, ಬಾಳೆಹೊನ್ನೂರು, ಕುದುರೆಮುಖ, ಜಯಪುರ  ಠಾಣೆ ಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಸುಮಾರು 25ಕ್ಕೂ ಹೆಚ್ಚು ಪ್ರಕರಣಗಳು ಪ್ರಭಾ ಮೇಲೆ ಇದ್ದು, ರಾಜ್ಯ ಸರ್ಕಾರವು ನಕ್ಸಲ್ ನಾಯಕಿಯ ಪತ್ತೆಗೆ  5 ಲಕ್ಷ ಬಹುಮಾನವನ್ನು ಘೋಷಿಸಿತ್ತು.

Join Whatsapp