ಮತ್ತೆ ಪ್ರಧಾನಿಯಾಗೋ ಇಚ್ಛೆ ವ್ಯಕ್ತಪಡಿಸಿದ ನವಾಝ್ ಷರೀಫ್‌

Prasthutha|

- Advertisement -

ಇಸ್ಲಾಮಾಬಾದ್: 4 ವರ್ಷಗಳ ನಂತರ ಲಂಡನ್ನಿನಿಂದ ತಾಯ್ನಾಡಿಗೆ ಮರಳಿರೋ ಪಾಕಿಸ್ತಾನ ಮಾಜಿ ಪ್ರಧಾನಿ ನವಾಝ್ ಷರೀಫ್‌ ಮತ್ತೆ ಪ್ರಧಾನಿಯಾಗೋ ಇಚ್ಛೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನಕ್ಕೆ ಕಾಲಿಡುತ್ತಲೇ ಚುನಾವಣೆಯ ಕ್ಯಾಂಪೇನ್ ಶುರುಮಾಡಿರೋ ಷರೀಫ್‌, ನಾನು ಈ ದೇಶಕ್ಕೆ ಮತ್ತೆ ಸೇವೆ ಮಾಡಬೇಕು ಎಂದಿದ್ದಾರೆ.

ಪಾಕಿಸ್ತಾನದ ಅಭಿವೃದ್ಧಿಯೇ ನನ್ನ ಏಕೈಕ ಕನಸು. ನಾವು ಹಣದುಬ್ಬರವನ್ನು ಕಡಿಮೆ ಮಾಡ್ತೀವಿ. ದೇಶದಲ್ಲಿ ಈಗ ಜನರು ಹಣದುಬ್ಬರದ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿ ಬದಲಾಗ್ಬೇಕು, ನಾವು ಬದಯಿಸೋಣ ಎಂದು ಹೇಳಿದ್ದಾರೆ. ಸುಮಾರು ಒಂದು ಗಂಟೆ ಷರೀಫ್‌ ಬೃಹತ್ ಸಂಖ್ಯೆಯಲ್ಲಿ ಸೇರಿದ ಜನರನ್ನು ಉದ್ದೇಶಿಸಿ ಮಾತನಾಡಿದರು.

- Advertisement -

1999 ರ ಪರಮಾಣು ಪರೀಕ್ಷೆ ಸೇರಿದಂತೆ ತಮ್ಮ ಅವಧಿಯಲ್ಲಿ ಮಾಡಲಾದ ಅಭಿವೃದ್ಧಿ ಕೆಲಸಗಳನ್ನು ಷರೀಫ್ ಮೆಲುಕು ಹಾಕಿದ್ದಾರೆ. 1999 ರಲ್ಲಿ ಪರಮಾಣು ಪರೀಕ್ಷೆ ಮಾಡದಂತೆ ನಮ್ಮ ಸರ್ಕಾರಕ್ಕೆ ಆಗಿನ ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್ 5 ಬಿಲಿಯನ್‌ ಡಾಲರ್‌ ಅಂದ್ರೆ ಸುಮಾರು 41,500 ಕೋಟಿ ರೂಪಾಯಿ ಹಣದ ಆಫರ್‌ ಕೊಟ್ಟಿದ್ದರು. ಆದ್ರೆ ನಾನು ದೇಶಕ್ಕಾಗಿ‌ ಪರಮಾಣು ಪರೀಕ್ಷೆ ಮಾಡಿದ್ದೇನೆ ಎಂದು ನವಾಝ್ ಷರೀಫ್‌ ಈ ವೇಳೆ ಹೇಳಿದ್ದಲ್ಲದೆ, ಮತ್ತೆ ಪಾಕಿನ ಪ್ರಧಾನಿಯಾಗೋ ಇಂಗಿತವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ.

Join Whatsapp