ಮಂಗಳೂರು: ವೀಸಾ ಅವಧಿ ಮುಗಿದ ವಿದೇಶಿ ಪ್ರಜೆಗಳು ಪೊಲೀಸ್ ವಶ

Prasthutha|

ಮಂಗಳೂರು: ವೀಸಾ ಅವಧಿ ಮುಗಿದರೂ ಮರಳದೇ ಭಾರತದಲ್ಲೇ ಉಳಿದುಕೊಂಡಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ನಗರ ಪೂರ್ವ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

ನೈಜೀರಿಯಾದ ಪ್ರಜೆ ಅಂಕಿಟೋಲಾ ಹಾಗೂ ಘಾನಾ ಪ್ರಜೆ ಸಲಾಮ್‌ ಕ್ರಿಶ್ಚಿಯನ್‌ ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ವಾಸವಿದ್ದರು. ತಮ್ಮ ಸ್ನೇಹಿತ ಅನಿಲ್‌ ಡಿಸಿಲ್ವ ಎಂಬುವರು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ನಗರಕ್ಕೆ ಬಂದಿದ್ದರು. ಅವರನ್ನು ವಶಕ್ಕೆ ಪಡೆದ ಪೊಲೀಸರು ಬೆಂಗಳೂರಿನ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಗೆ ಹಾಜರುಪಡಿಸಿದ್ದಾರೆ. ಬಳಿಕ ಬೆಂಗಳೂರಿನಲ್ಲಿರುವ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್ವಾಲ್‌ ತಿಳಿಸಿದ್ದಾರೆ

Join Whatsapp