ನೌಕಾಪಡೆಯ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

Prasthutha|

ಮುಂಬೈ: ಭಾರತೀಯ ನೌಕಾಪಡೆಗೆ ಸೇರಿದ ಹೆಲಿಕಾಪ್ಟರ್ ಒಂದು ಇಂದು ಮುಂಬೈ ಕರಾವಳಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್’ಎಚ್) ಸಾಮಾನ್ಯ ಹಾರಾಟದಲ್ಲಿದ್ದಾಗ ಈ ಘಟನೆ ಸಂಭವಿಸಿದೆ.

- Advertisement -


‘ಧ್ರುವ್’ ಹೆಲಿಕಾಪ್ಟರ್’ನ ಮೂವರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.


“ಭಾರತೀಯ ನೌಕಾಪಡೆಯ ಎಎಲ್’ಎಚ್ ಮುಂಬೈನಿಂದ ಸಾಮಾನ್ಯ ಕಾರ್ಯಾಚರಣೆಯಲ್ಲಿ ಕರಾವಳಿಗೆ ಸಮೀಪದಲ್ಲಿತ್ತು. ತಕ್ಷಣ ಎಚ್ಚೆತ್ತುಕೊಂಡ ಶೋಧ ಮತ್ತು ರಕ್ಷಣಾ ನೌಕಾ ಗಸ್ತು ನೌಕೆಯ ಅಧಿಕಾರಿಗಳು, ಹೆಲಿಕಾಪ್ಟರ್’ನಲ್ಲಿದ್ದ ಮೂವರು ಸಿಬ್ಬಂದಿಯನ್ನು ರಕ್ಷಿಸಿದ್ದಾರೆ” ಎಂದು ನೌಕಾಪಡೆ ತನ್ನ ಅಧಿಕೃತ ಟ್ವಿಟರ್’ನಲ್ಲಿ ತಿಳಿಸಿದೆ.

Join Whatsapp