ಭಾರತದಿಂದ ಅಫಘಾನಿಸ್ತಾನಕ್ಕೆ 20,000 ಮೆಟ್ರಿಕ್ ಟನ್ ಗೋಧಿ ರವಾನೆ

Prasthutha|

ನವದೆಹಲಿ: ಭಾರತವು ಹಿಂದೆ ತಾಲಿಬಾನ್ ಜೊತೆಗೆ ಮಾಡಿಕೊಂಡಿರುವ ಒಡಂಬಡಿಕೆಯಂತೆ 20,000 ಮೆಟ್ರಿಕ್ ಟನ್ ಗೋಧಿಯನ್ನು ಚಾಬಹರ್ ಬಂದರು ಮೂಲಕ ಅಫಘಾನಿಸ್ತಾನಕ್ಕೆ ಈ ವಾರ ಕಳುಹಿಸಿಕೊಡಲಿದೆ.

- Advertisement -


ದಿಲ್ಲಿಯಲ್ಲಿ ನಡೆದ ಅಫಘಾನಿಸ್ತಾನ ಸಂಬಂಧಿ ಜೆಡಬ್ಲ್ಯುಜಿ- ಭಾರತ ಕೇಂದ್ರ ಏಷ್ಯಾ ಜಂಟಿ ಗುಂಪಿನ ಸಭೆಯಲ್ಲಿ ಮಂಗಳವಾರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ನೆಲ ದಾರಿಯಾಗಿ ಪಾಕಿಸ್ತಾನದೊಳಗಿನಿಂದ ಕಳುಹಿಸಿಕೊಡಲು ಮಾಡಿಕೊಂಡಿದ್ದ ಒಪ್ಪಂದದ ಕಾಲ ಮುಗಿದು ಹೋಗಿದೆ. ಆ ಬಗ್ಗೆ ಮತ್ತೆ ಮಾತುಕತೆ ಆಗಿಲ್ಲ.


ಕಳೆದ ವರ್ಷ ನೀಡಿದ 50,000 ಮೆಟ್ರಿಕ್ ಟನ್ ಆಶ್ವಾಸನೆಯಂತೆ ಭಾರತವು 40,000 ಮೆಟ್ರಿಕ್ ಟನ್ ಈಗಾಗಲೇ ಕಳುಹಿಸಿಕೊಟ್ಟಿದೆ. ಹಿಂದೆ ಆಗಿನ ಪ್ರಧಾನಿ ಇಮ್ರಾನ್ ಖಾನ್ ಜೊತೆಗೆ ಒಪ್ಪಂದವಾಗಿತ್ತು. ಆಮೇಲೆ ಭಾರೀ ಪ್ರವಾಹ ಬಂದುದರಿಂದ ಹಡಗೇರಿಸುವ ಕಾರ್ಯ ಸಾಧ್ಯವಾಗಿರಲಿಲ್ಲ. ಅದರ ನಡುವೆ ಪಾಕಿಸ್ತಾನ 2021ರಲ್ಲಿ ಅಫಘಾನಿಸ್ತಾನಕ್ಕೆ ಸಾಗಿಸಲು ನೀಡಿದ್ದ ಕಾಲಾವಧಿಯೂ ಮುಗಿದು ಹೋಗಿದೆ.
“”ಸದ್ಯದ ಮಾನವೀಯ ನೆಲೆಯ ಮೇಲೆ ವಿಶ್ವ ಸಂಸ್ಥೆಯ ಆಹಾರ ಯೋಜನೆಯಡಿ ಇರುವ ಭಾರತವು ನೆರವಾಗಿ ಅಫಘಾನಿಸ್ತಾನಕ್ಕೆ ಚಾಬಹರ್ ಬಂದರು ದಾರಿಯಾಗಿ 20,000 ಮೆಟ್ರಿಕ್ ಟನ್ ಗೋಧಿ ರವಾನಿಸಲು ಒಪ್ಪಿದೆ” ಎಂದು ವಿದೇಶಾಂಗ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಭೆಯಲ್ಲಿ ಕಜಕಸ್ತಾನ್, ಕಿರ್ಗಿಜ್ ರಿಪಬ್ಲಿಕ್, ತಜಿಕಿಸ್ತಾನ್, ತುರ್ಕ್ ಮೆನಿಸ್ತಾನ್, ಉಜ್ಬೆಕಿಸ್ತಾನ್ ದೇಶಗಳು ಭಾರತದೊಂದಿಗೆ ಮಾತುಕತೆಯಲ್ಲಿ ಭಾಗಿಯಾಗಿದ್ದವು.

- Advertisement -


ಜೆಡಬ್ಲ್ಯುಜಿ ಸಭೆಯು 2022ರ ಜನವರಿಯ ಭಾರತ ಮಧ್ಯ ಏಷ್ಯಾ ಶೃಂಗ ಸಭೆಯ ಬಳಿಕ ಅಫಘಾನಿಸ್ತಾನದ ಜೊತೆಗೆ ವ್ಯವಹರಿಸಲು ವಿಶೇಷ ಸಂಪರ್ಕ ಗುಂಪು ಒಂದನ್ನು ರಚಿಸಿತ್ತು. ಭಾರತವು ಮಾದಕ ದ್ರವ್ಯ ಕಳ್ಳ ಸಾಗಣೆ ವಿರುದ್ಧ ವಿಶ್ವ ಸಂಸ್ಥೆಯ ಓಡಿಸಿ ಯೋಜನೆಯಡಿ ಕೂಡ ಅಫಘಾನಿಸ್ತಾನದ ಜೊತೆಗೆ ಕೆಲಸ ಮಾಡಲಿದೆ. ಈ ಭಾರತ ಮಧ್ಯ ಏಷ್ಯಾ ಗುಂಪು ಮಾದಕ ದ್ರವ್ಯ ಸೇವನೆ ಮತ್ತು ಸಾಗಣೆ ವಿರುದ್ಧವು ಕಣ್ಣಿಟ್ಟಿದೆ.
ಈ ಸಂಬಂಧ ತರಬೇತಿ ನೀಡಲು ಭಾರತದ ತಾಂತ್ರಿಕ ತಂಡವೊಂದು ಕಾಬೂಲಿಗೆ ಹೋಗುತ್ತದೋ, ಅಥವಾ ಅಫಘಾನಿಸ್ತಾನದವರಿಗೆ ವೀಸಾ ನೀಡಿ ತರಬೇತಿ ನೀಡಲಾಗುವುದೋ ಎನ್ನುವುದು ತಿಳಿದು ಬಂದಿಲ್ಲ. 2021ರಲ್ಲಿ ತಾಲಿಬಾನ್ ಅಫಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದಾಗಿನಿಂದ ಭಾರತವು ಎಲ್ಲ ಅಫಘಾನಿಯರ ವೀಸಾ ರದ್ದು ಮಾಡಿದೆ; ಅಫಘಾನ್ ವಿದ್ಯಾರ್ಥಿಗಳು ಬರಲು ಕೂಡ ಹೊಸ ವೀಸಾ ನೀಡುತ್ತಿಲ್ಲ.


ಕಾಬೂಲಿನಲ್ಲಿ ತಾಲಿಬಾನಿಗಳು ಅಧಿಕಾರ ಹಿಡಿದ ಬಳಕ ಆ ದೇಶದಲ್ಲಿ ಅಫೀಮು ಬೆಳೆಯುವುದು ಮೂರು ಪಟ್ಟು ಹೆಚ್ಚಿದೆ ಎಂದು ವಿಶ್ವ ಸಂಸ್ಥೆಯ ಓಡಿಸಿ ಹೇಳಿದೆ. ಜಗತ್ತಿನ 80% ಅಫೀಮು ಮತ್ತು ಹೆರಾಯಿನ್ ಅಫಘಾನಿಸ್ತಾನದಿಂದ ಕಳ್ಳ ಸಾಗಣೆ ಆಗುವುದೆಂದೂ, ಆ ದೇಶದ ಜನಸಂಖ್ಯೆಯಲ್ಲಿ ಹತ್ತನೇ ಒಂದು ಭಾಗ ಜನ ಎಂದರೆ 30 ಲಕ್ಷ ಜನರು ಮಾದಕ ವ್ಯಸನಿಗಳು ಎಂದೂ ಯುಎನ್ ತಿಳಿಸಿದೆ. ಮಾದಕ ದ್ರವ್ಯದೊಂದಿಗೆ ಅಲ್ಲಿ ಉಗ್ರ ವಾದ ಹೆಚ್ಚಿರುವುದರಿಂದ ಅಲ್ಲಿನ ಸಾಕಷ್ಟು ಜನರು ನೆರೆಯ ಮಧ್ಯ ಏಷ್ಯಾ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.


“ಅಫಘಾನಿಸ್ತಾನದಲ್ಲಿ ಮಹಿಳೆಯರ ಸಹಿತ ಎಲ್ಲ ಎಲ್ಲ ನಾಗರಿಕರಿಗೂ ಮೂಲಭೂತ ಹಕ್ಕುಗಳು ದಕ್ಕುವಂತೆ ಮಾಡುವ ವಿಷಯಕ್ಕೂ ಜೆಡಬ್ಲ್ಯುಜಿ ಮಹತ್ವ ನೀಡಿದೆ. ವಿಶ್ವ ಸಂಸ್ಥೆಯು ಉಗ್ರರು ಎಂದು ಹೇಳಿದ ಯಾವ ಗುಂಪಗಳೂ ಇರಬಾರದು ಮತ್ತು ಅವರಿಗೆ ನೆರೆಯ ನೆಲೆಗಳಲ್ಲಿ ಜಾಗ ಸಿಗಬಾರದು ಎಂಬ ತೀರ್ಮಾನವನ್ನು ಸಹ ಭಾರತ ಮಧ್ಯ ಏಶಿಯಾದ ಜೆಡಬ್ಲ್ಯುಜಿ ತೀರ್ಮಾನಿಸಿದೆ.


ಇದರ ನಡುವೆ ತುರ್ಕಮೆನಿಸ್ತಾನ್ ಹೊರತಾಗಿ ಈ ಎಲ್ಲ ದೇಶಗಳು ಭಾಗವಹಿಸುವ ಎಸ್ ಸಿಒ- ಶಾಂಘೈ ಸಹಕಾರ ಸಂಸ್ಥೆಯ ಸಮಾವೇಶವನ್ನು ಸಹ ಭಾರತವು ಈ ವರ್ಷ ಆತಿಥೇಯವಾಗಿ ಹಮ್ಮಿಕೊಂಡಿದೆ.
ಎಸ್ ಸಿಓ ಸಂಘಟನೆಯ ಸದಸ್ಯ ದೇಶಗಳಾದ ಚೀನಾ, ಪಾಕಿಸ್ತಾನ, ರಷ್ಯಾ, ಮಧ್ಯ ಏಷ್ಯಾ ದೇಶಗಳು ಈ ದೇಶಗಳ ತಜ್ಞರ ಪ್ರವಾಹ ನಿರ್ವಹಣಾ ತಜ್ಞರ ಮತ್ತು ಮಿಲಿಟರಿ ಸಹಕಾರದ ಸಭೆಯನ್ನು ಕಳೆದ ವಾರ ಭಾರತವು ನಡೆಸಿ ಕೊಟ್ಟಿದೆ. ಮುಂದಿನ ಕೆಲವು ವಾರಗಳಲ್ಲಿ ರಕ್ಷಣಾ, ವ್ಯಾಪಾರ, ವಾಣಿಜ್ಯ ಸಂಬಂಧಿ ಮಂತ್ರಾಲಯ ಮಟ್ಟದ ಸಭೆಯು ನಡೆಯಲಿದೆ.


ಮೇ ತಿಂಗಳಿನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಎಲ್ಲ ಎಸ್ ಸಿಓ ಸದಸ್ಯ ದೇಶಗಳ ವಿದೇಶಾಂಗ ಸಚಿವರುಗಳ ಸಭೆಯನ್ನು ಹಮ್ಮಿಕೊಂಡಿದ್ದಾರೆ. ಜೂನ್ ತಿಂಗಳಿನಲ್ಲಿ ಪ್ರಧಾನಿ ಮೋದಿಯವರು ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್, ರಶಿಯಾದ ಅಧ್ಯಕ್ಷ ವ್ಲದಿಮಿರ್ ಪುತಿನ್, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ರನ್ನು ಆಹ್ವಾನಿಸಿ ಒಂದು ಶೃಂಗ ಸಭೆಯನ್ನು ಇಟ್ಟುಕೊಳ್ಳುತ್ತಿದ್ದಾರೆ.

Join Whatsapp