ನೌಷಾದ್ ಹಾಜಿ ಸುರಲ್ಪಾಡಿ ಚಾರಿಟೇಬಲ್ ಟ್ರಸ್ಟ್ ಲೋಗೋ ಬಿಡುಗಡೆ

Prasthutha|

ಮಂಗಳೂರು: ಇತ್ತೀಚೆಗೆ ಅಕಾಲಿಕ ಮರಣ ಹೊಂದಿದ ಸಮಾಜ ಸೇವಕ ಮರ್ಹೂಂ ನೌಷಾದ್ ಹಾಜಿ ಸುರಲ್ಪಾಡಿಯವರ ಸಮಾಜಿಕ ಸೇವೆಯನ್ನು ಜೀವಂತವಾಗಿಸಲು, ಅವರ ಕನಸುಗಳನ್ನು ನನಸಾಗಿಸಲು ಆರಂಭಿಸಿರುವ ನೌಷಾದ್ ಹಾಜಿ ಸುರಲ್ಪಾಡಿ ಚಾರಿಟೇಬಲ್ ಟ್ರಸ್ಟ್’ನ ಲೋಗೋ ಬಿಡುಗಡೆ ಕಾರ್ಯಕ್ರಮ ಕಾರ್ಯಕಾರಿ ಸಮಿತಿಯ ಮೊದಲ ಸಭೆಯಲ್ಲಿ ನಡೆಯಿತು.

- Advertisement -


ನೌಷಾದ್ ಹಾಜಿ ಸುರಲ್ಪಾಡಿ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಆಸಿಫ್ ಆದರ್ಶ್ ಸುರಲ್ಪಾಡಿಯವರ ಅಧ್ಯಕ್ಷತೆಯಲ್ಲಿ ಅಲ್- ಬಿರ್ರ್ ಗುರುಪುರ ಕೈಕಂಬ ಸಭಾಂಗಣದಲ್ಲಿ ಸಭೆ ನಡೆಯಿತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಶಾಫಿ ಮುಲರಪಟ್ನ, ಆಸಿಫ್ ಫರಂಗಿಪೇಟೆ, ಕಾರ್ಯದರ್ಶಿಯಾದ ಡಾ.ಇ.ಕೆ.ಎ.ಸಿದ್ದೀಕ್ ಅಡ್ಡೂರು, ಕೋಶಾಧಿಕಾರಿ ಮುಸ್ತಫಾ ಅಡ್ಡೂರು ದೆಮ್ಮಲೆ , ಅಶ್ರಫ್ ಬೆಳ್ಳೂರು, ರಿಯಾಝ್ ಕಣ್ಣೂರು, ಯಾಸೀರ್ ಮೂಡಬಿದಿರೆ, ಹಮೀದ್ ಕಣ್ಣೂರು, ಸಮದ್ ಅರಳ, ಶಾಫಿ ಪಡೀಲ್,ಹರ್ಶದ್ ಕುಪ್ಪೆಪದವು,ಶಿಹಾಬ್ ಮುಲರಪಟ್ನ, ಖಲೀಲ್ ಇ.ಕೆ,ಹಾಶೀರ್ ಪೇರೆಮಾರ್, ಮಲಿಕ್ ಮುಂತಾದವರು ಉಪಸ್ಥಿತರಿದ್ದರು.


ಮರ್ಹೂಂ ನೌಷಾದ್ ಹಾಜಿ ಸಹೋದರರಾದ ಜಲೀಲ್ ಅರಳ, ಅಬ್ದುಲ್ ಸತ್ತಾರ್ ಕೃಷ್ಣಾಪುರ ಹಾಜರಿದ್ದರು. ಶಾಫಿ ಮುಲರಪಟ್ನ ಧನ್ಯವಾದಗೈದರು.

Join Whatsapp