ಜಮೀನು ತಕರಾರು; ನ್ಯಾಯಕ್ಕಾಗಿ ಮೂವರು ಮಕ್ಕಳ ಜೊತೆ ಟವರ್ ಏರಿದ ತಂದೆ

Prasthutha|

ಚಿಕ್ಕಬಳ್ಳಾಫುರ:  ತನಗೆ ನ್ಯಾಯ ಕೊಡಿಸಲು ಪೊಲೀಸರು ಕಂದಾಯ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿ ಮೂವರು ಮಕ್ಕಳ ಜೊತೆ ತಂದೆಯೊಬ್ಬರು ಟವರ್ ಏರಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಕನ್ನಂಪಲ್ಲಿ ಬಳಿ ನಡೆದಿದೆ.

- Advertisement -

ಗಂಗರಾಜು(32) ಹಾಗೂ ಮೂವರು ಮಕ್ಕಳಾದ ಮಕ್ಕಳಾದ ನಿತಿನ್(4) ಅಂಕಿತ(11) ನಿಖಿಲ್ (10) ಮೊಬೈಲ್ ಟವರ್ ಏರಿದ್ದರು. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಭೇಟಿ ನೀಡಿ ಹರಸಾಹಸ ಪಟ್ಟು ಕೆಳಗಿಳಿಸಿದ್ದಾರೆ.

ಗಂಗರಾಜು ಅವರ ಜಮೀನನ್ನು ಅವರಿಗೆ ತಿಳಿಯದಂತೆ ಹಲವರು ಮಾರಿಕೊಂಡಿದ್ದಾರೆ. ಜಮೀನು ವಿವಾದದಲ್ಲಿ ತನಗೆ ಅನ್ಯಾಯವಾಗಿದ್ದು, ಗ್ರಾಮದ ವೆಂಕಟರೆಡ್ಡಿ, ಮಲ್ಲಪ್ಪ, ನಾರಾಯಣಪ್ಪ ಎಂಬವರು ಮಾಹಿತಿಯಿಲ್ಲದೆ ನನ್ನ ಜಮೀನು ಸೇಲ್ ಮಾಡಿಕೊಂಡಿದ್ದಾರೆಂದು ಗಂಗರಾಜು ಆರೋಪಿಸಿದ್ದಾರೆ.

- Advertisement -

ಅಧಿಕಾರಿಗಳು ಜಮೀನು ವಿವಾದ ಬಗೆಯರಿಸುವುದಾಗಿ ಭರವಸೆ ಕೊಟ್ಟ ನಂತರ ಗಂಗರಾಜು ಹಾಗೂ ಆತನ ಮಕ್ಕಳು ಕೆಳಕ್ಕೆ ಇಳಿದಿದ್ದಾರೆ.

Join Whatsapp