ರಮೇಶ್ ಜಾರಕಿಹೊಳಿ ಸಿಡಿ ಹಗರಣದ ಆರೋಪಿ ನರೇಶ್ ವೀಡಿಯೋದಲ್ಲಿ ಪ್ರತ್ಯಕ್ಷ

Prasthutha|

ಬೆಂಗಳೂರು : ರಮೇಶ್ ಜಾರಕಿಹೊಳಿ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಎಸ್ ಐಟಿ ತಂಡದ ಬಿರುಸಿನ ತನಿಖೆಯ ಬೆನ್ನಲ್ಲೇ ಆರೋಪಿ ಭವಿತ್ ನಂತರ  ಮತ್ತೋರ್ವ ಆರೋಪಿ ನರೇಶ್ ಕೂಡ ವೀಡಿಯೋ ರಿಲೀಸ್ ಮಾಡಿದ್ದಾರೆ.

 ನನ್ನನ್ನು ಸಿಡಿ ಪ್ರಕರಣದ ಸಂತ್ರಸ್ತೆ ಸಂಪರ್ಕಿಸಿರುವುದು ನಿಜ , ತಾನು ಹಣ ಪಡೆದಿರುವುದಾಗಿ ಆರೋಪಿಸುತ್ತಿದ್ದಾರೆ. ಆದರೆ ಸಿಡಿ ಪ್ರಕರಣದ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ.

- Advertisement -

ಈ ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ. ಮೊದಲು ನಾನು ಹಣ ಪಡೆದಿರುವ ಬಗ್ಗೆ ಸಾಕ್ಷಿ ಕೊಡಿ.  ತಾನು ತನಿಖೆಗೆ ಬಂದರೆ ಏನಾಗುತ್ತೆಂದು ಗೊತ್ತು.  ಅದಕ್ಕಾಗಿಯೇ ತಾನು ಇದುವರೆಗೆ ತನಿಖೆಗೆ ಹಾಜರಾಗಲಿಲ್ಲ. ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.

ನಾನು ಪತ್ರಕರ್ತನಾಗಿರುವುದರಿಂದ ಸ್ನೇಹಿತರ ಮೂಲಕ ಯುವತಿಯ ನಂಬರ್ ಪಡೆದು ಸಂಪರ್ಕಿಸಿದ್ದೆ.  ಆ ವೇಳೆಯಲ್ಲೇ ತನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆದ್ದರಿಂದ ನಾನು ಯುವತಿಯ ಬಳಿ ಸರಿಯಾಗಿ ಮಾತನಾಡಿರಲಿಲ್ಲ. ಒಮ್ಮೆ ಕರೆ ಮಾಡಿ,  ಸಾರ್ ನಮಗೆ ನ್ಯಾಯ ಕೊಡಿಸೋದಿಲ್ವ ಎಂದು ಕೇಳಿದ್ರು. ಆಗ ನನ್ನ ತಾಯಿಗೆ ಹುಷಾರ್ ಇಲ್ಲದ್ದು, ಮಗಳ ನಾಮಕರಣದ ಬ್ಯುಸಿ ಬಗ್ಗೆ ತಿಳಿಸಿದೆ. ಸಾರ್ ನಾಮಕರಣಕ್ಕೆ ನನ್ನನ್ನು ಕರೆಯೋದಿಲ್ವಾ ಅಂದ್ರು. ಬಾ ಅಂದೆ.. ಹೀಗಾಗಿ ನಾಮಕರಣಕ್ಕೂ ಬಂದಿದ್ರು ಎಂದಿದ್ದಾರೆ.

ನಂತರ ಸಿಡಿ ರಿಲೀಸ್ ಆದಾಗ ಆ ವೈರಲ್ ದೃಶ್ಯ ನನ್ನ ಮೊಬೈಲ್ ಗೂ ಬಂತು. ಆಕೆಯ ಜೊತೆಗೆ ಮಾತನಾಡಿದ್ದ ಕಾರಣ ನನ್ನನ್ನೂ ಸಿಲುಕಿಸೋ ಯತ್ನ ನಡೆಸಿದ್ದಾರೆ. ನನಗೆ ನೋಟಿಸ್ ಬಂದಾಗ ಎಸ್ ಐ ಟಿ ಮುಂದೆ ತನಿಖೆಗೆ ಹಾಜರಾಗಲು ಬಯಸಿದ್ದೆ. ಆದರೆ ಅಲ್ಲಿ ಯುವತಿಗೆ ಆಗಿರುವ ಅನ್ಯಾಯದ ಬಗ್ಗೆ ಯಾರು ಮಾತನಾಡುವುದಿಲ್ಲ. ಬದಲಾಗಿ ರಮೇಶ್ ಜಾರಕಿಹೊಳಿಯವರನ್ನೇ ಸಂತ್ರಸ್ತನ ಎಂಬಂತೆ ಬಿಂಬಿಸಲಾಗುತ್ತಿದೆ. ಹೀಗಾಗಿ ನಾನು ಸದ್ಯಕ್ಕೆ ತನಿಖಾಧಿಕಾರಿಗಳ ಮುಂದೆ ಹಾಜರಾಗುವುದಿಲ್ಲ. ನಾಲ್ಕೈದು ದಿನಗಳ ನಂತ್ರ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುವೆ. ಆಗ ಎಲ್ಲವನ್ನೂ ಹೇಳುತ್ತೇನೆ. ನಾನು ಈ ಪ್ರಕರಣದಲ್ಲಿ ಒಂದು ರೂಪಾಯಿ ಹಣ ಕೂಡ ಪಡೆದಿಲ್ಲ. ನನ್ನ ಮನೆಯ ಪರಿಸ್ಥಿತಿಯನ್ನೊಮ್ಮೆ ಹೋಗಿ ನೋಡಿದರೆ ನಿಮಗೆ ಎಲ್ಲಾ ಗೊತ್ತಾಗಬಹುದು ಎಂದು ತಿಳಿಸಿದ್ದಾರೆ.

- Advertisement -