ಬಿಜೆಪಿ ನಾಯಕರ ವಿರುದ್ಧದ ಮುಝಫ್ಫರ್ ನಗರ ಗಲಭೆ ಪ್ರಕರಣ ವಾಪಾಸ್ ಪಡೆಯಲು ಆದಿತ್ಯನಾಥ್ ಸರಕಾರದ ಅರ್ಜಿ : ಸುಪ್ರೀಮ್ ಕೋರ್ಟ್ ನಕಾರ

Prasthutha|

ಲಕ್ನೋ: ಮುಝಫ್ಫರ್ ನಗರ ಗಲಭೆ ಪ್ರಕರಣಗಳನ್ನು ಹಿಂಪಡೆಯುವಂತೆ ಕೋರಿ ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಸುಪ್ರೀಮ್ ಕೋರ್ಟ್ ಕೈಗೆತ್ತಿಕೊಂಡಿದೆ. ಈ ಸಂಬಂಧ ತನ್ನ ಆದೇಶವನ್ನು ಪ್ರಕಟಿಸಿರುವ ಸುಪ್ರೀಮ್ ಕೋರ್ಟ್, ಹಾಲಿ ಹಾಗೂ ಮಾಜಿ ಸಂಸದ ಮತ್ತು ಶಾಸಕರ ವಿರುದ್ಧದ ಯಾವುದೇ ಕ್ರಿಮಿನಲ್ ಪ್ರಕರಣಗಳನ್ನು ರಾಜ್ಯ ಸರ್ಕಾರಗಳು ಹೈಕೋರ್ಟ್ ನ ಆದೇಶವಿಲ್ಲದೆ ಹಿಂಪಡೆಯಲು ಸಾಧ್ಯವಿಲ್ಲವೆಂದು ತಿಳಿಸಿದೆ.

- Advertisement -

ವಿವಿಧ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಶಾಸಕ, ಸಂಸದರನ್ನು ಜೀವನ ಪರ್ಯಂತ ಚುನಾವಣೆಗೆ ಸ್ಪರ್ಧಿಸದಂತೆ ತಡೆ ನೀಡದಿರಲು ನಿರ್ದೇಶಿಸುವಂತೆ ಕೋರಿ ಸುಪ್ರೀಮ್ ಕೋರ್ಟ್ ಗೆ ಅಶ್ವಿನಿ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ವಿನೀತ್ ಶರಣ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಹಾಲಿ ಹಾಗೂ ಮಾಜಿ ಸಂಸದ ಮತ್ತು ಶಾಸಕರ ವಿರುದ್ಧದ ಯಾವುದೇ ಕ್ರಿಮಿನಲ್ ಪ್ರಕರಣವನ್ನು ಹಿಂಪಡೆಯಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಅಲ್ಲಿನ ಹೈಕೋರ್ಟನ್ನು ಸಂಪರ್ಕಿಸುವಂತೆ ನಿರ್ದೇಶಿಸಿದೆ.

ಡಿಸೆಂಬರ್ 2020 ರಲ್ಲಿ ಯುಪಿ ಸರ್ಕಾರವು ಗಲಭೆ ಪ್ರಕರಣದಲ್ಲಿ ಆರೋಪಿಗಳಾಗಿರುವ ರಾಜಕಾರಣಿಗಳ ವಿರುದ್ಧದ ಪ್ರಕರಣವನ್ನು ಹಿಂಪಡೆಯುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಉಲ್ಲೇಖಿಸಿ ಸುಪ್ರೀಮ್ ಕೋರ್ಟ್ ನ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಗಲಭೆಗೆ ಸಂಬಂಧಿಸಿದಂತೆ ಹಲವು ಪ್ರಕರಣದ ವಿಚಾರಣೆಯು ಇನ್ನೂ ಬಾಕಿಯಿದೆ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಸಂಗೀತ್ ಸೋಮ್, ಕಪಿಲ್ ದೇವ್, ಸುರೇಶ್ ರಾಣಾ ಮತ್ತು ಸಾಧ್ವಿ ಪ್ರಾಚಿ ಸೇರಿದಂತೆ ಹಲವು ರಾಜಕಾರಣಿಗಳ ವಿರುದ್ಧದ ಪ್ರಕರಣವನ್ನು ಹಿಂಪಡೆಯಲು ಕೋರಿದೆ ಎಂದು ಪಬ್ಲಿಕ್ ಕ್ಯೂರಿ ವಿಜಯ್ ಹನ್ಸಾರಿಯ ಅವರು ತಿಳಿಸಿದ್ದಾರೆ.

- Advertisement -

ಎರಡು ಕಡೆಯ ವಾದವನ್ನು ಆಲಿಸಿದ ಸುಪ್ರೀಮ್ ಕೋರ್ಟ್ ನ ನ್ಯಾಯಮೂರ್ತಿಗಳು ಸೆಪ್ಟಂಬರ್ 2020 ರ ಮೊದಲು ಸಂಸದ, ಶಾಸಕರ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನು ಪರಿಶೀಲನೆಗಾಗಿ ಹೈಕೋರ್ಟ್ ಗೆ ವಹಿಸಲಾಗಿದೆ. ಇದರ ಮುಂದಿನ ವಿಚಾರಣೆಯು ಆಗಸ್ಟ್ 25 ರಂದು ನಡೆಯಲಿದೆಯೆಂದು ಪೀಠ ಸ್ಪಷ್ಟಪಡಿಸಿದೆ.

Join Whatsapp