ಬಸುರಿ ಹೆಣ್ಣಿನ ಪಿಎಸ್ಐ ಸಾಹಸ

Prasthutha|

ಕಲಬುರಗಿ: ಪಿಎಸ್ಐ ನೇಮಕಾತಿಗೆ ನಡೆದ ದೈಹಿಕ ದೃಢತೆ ಪರೀಕ್ಷೆಯಲ್ಲಿ 24ರ ಪ್ರಾಯದ ಗರ್ಭಿಣಿ ಅಶ್ವಿನಿ ಎಂಬವರು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

- Advertisement -

ದೈಹಿಕ ಪರೀಕ್ಷೆಗಳಾದ ಲಾಂಗ್ ಜಂಪ್, ರನ್ನಿಂಗ್, ಶಾಟ್ ಪುಟ್ ಎಲ್ಲದರಲ್ಲೂ ಎಂಜಿನಿಯರಿಂಗ್ ಪದವೀಧರೆ ಅಶ್ವಿನಿ ಮಿಂಚಿದರು. ದೈಹಿಕ ಪರೀಕ್ಷೆಯ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿಕೊಂಡಿದ್ದು, ಆರೋಗ್ಯದಲ್ಲಿ ಯಾವುದೇ ಏರುಪೇರು ಆಗಿಲ್ಲ ಎಂದು ಕುಟುಂಬದವರು ಹೇಳಿದ್ದಾರೆ.

ಅಶ್ವಿನಿ ಎರಡೂವರೆ ತಿಂಗಳ ಗರ್ಭಿಣಿ. ಈ ವಿಷಯ ಪೊಲೀಸರಿಗೆ ಅನಂತರ ತಿಳಿದಿದೆ. ಗರ್ಭಿಣಿಯರನ್ನು ದೈಹಿಕ ಪರೀಕ್ಷೆಗೆ ಒಳಪಡಿಸಲು ಅವಕಾಶವಿಲ್ಲ. ಹೀಗೆಂದು ಈಗ ಪೊಲೀಸರು ತಲೆ ಬಿಸಿ ಮಾಡಿಕೊಳ್ಳುತ್ತಿದ್ದಾರೆ.

Join Whatsapp