ಮುಸ್ಲಿಮರು ಹಲಾಲ್ ಗೊಳಿಸಿದ ಆಹಾರ ಮಾತ್ರ ಸೇವಿಸಲಿದ್ದಾರೆ: ಕೆ.ಅಶ್ರಫ್

Prasthutha|

ಮಂಗಳೂರು; ಪ್ರಜಾಪ್ರಭುತ್ವ ದೇಶದಲ್ಲಿ, ಪ್ರಜೆಗಳು ನಿರ್ಧಿಷ್ಟ ಆಹಾರ ಸೇವಿಸಬೇಕು,ನಿರ್ಧಿಷ್ಟ ಉಡುಪು ಧರಿಸಬೇಕು,ನಿರ್ಧಿಷ್ಟ ರೀತಿಯಲ್ಲಿಯೇ ಆಹಾರ ತಯಾರಿ ನಡೆಸಬೇಕು ಎಂದು ಫರ್ಮಾನು ಹೊರಡಿಸಲು ನಾವು ಕೊಲೊನಿಯಲ್ ಸಾಮ್ರಾಜ್ಯದಲ್ಲಿ ಜೀವಿಸುತ್ತಿಲ್ಲ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್ ಹೇಳಿದ್ದಾರೆ.

- Advertisement -

ರಾಜ್ಯದಲ್ಲಿ ವಿವಾದ ಸೃಷ್ಟಿಸಿರುವ ಜಟ್ಕಾ ಕಟ್ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, ವಿವಿಧತೆ ಯಲ್ಲಿ ಏಕತೆ ಪ್ರತಿಪಾದಿಸಿದ ಡಾ.ಅಂಬೇಡ್ಕರ್,ನಾರಾಯಣ ಗುರು ಸ್ವಾಮಿ,ಸ್ವಾಮಿ ವಿವೇಕಾನಂದರು,ಬಸವಣ್ಣ,ತಿರುವಳ್ಳುವರ್, ಮಹಾತ್ಮ ಜ್ಯೋತಿ ಭಾಪುಳೆ ,ಮಹಾತ್ಮ ಗಾಂಧಿ,ದೇವರಾಜ ಅರಸು ರವ ರಂತಹ ಸಾಮಾಜಿಕ ಹೋರಾಟಗಾರರು ಜೀವಿಸಿದ ನಾವು ನೆಲದಲ್ಲಿ ಬದುಕುತ್ತಿದ್ದೇವೆ, ಇಲ್ಲಿ ನಾವಿಚ್ಚಿಸಿದ ಆಹಾರವನ್ನು ಸೇವಿಸುತ್ತೇವೆ ಎಂದಿದ್ದಾರೆ.

ಭಾರತದ ಮೂಲ ನಿವಾಸಿಗಳು ನಿಸರ್ಗ ಲಭ್ಯ ಆಹಾರ ಸೇವಿಸಿ ಉತ್ತಮ ನಾಗರಿಕ ಬದುಕು ರೂಪಿಸಲು ನಮಗೆ ಕಲಿಸಿ ಕೊಟ್ಟಿದ್ದಾರೆ. ಜನರು ಹಸಿವು ನೀಗಿಸಲು ಯಾವ ಆಹಾರ , ಹೇಗೆ ತಯಾರಿಸಬೇಕು ಎಂದು ಆರ್ಯರಿಂದ ಕಲಿತು ಕೊಳ್ಳುವ ಗತಿಗೇಡು ಇಲ್ಲಿನ ನಾಗರಿಕರಿಗೆ ಬರಲಿಲ್ಲ. ಆದುದರಿಂದ ಭಾರತದ ಮುಸ್ಲಿಮರು ಹುಟ್ಟಿನಿಂದ ಸಾಯುವವರೆಗೆ ಹಲಾಲ್ ಗೊಳಿಸಿದ ಶುದ್ಧ ಆಹಾರ, ಮಾಂಸ,ಕೋಳಿ, ಕೋಣ ಗಳನ್ನು ಭಕ್ಷಿಸಲಿದ್ದಾರೆ. ಮತ್ತು ತಮ್ಮ ಆರೋಗ್ಯವನ್ನು ಸಮರ್ಥವಾಗಿ ಸಂರಕ್ಷಿಸಲು ಭದ್ದರು. ಈ ಬಗ್ಗೆ ಇತರರು ಚಿಂತಿಸುವ ಅಗತ್ಯವಿಲ್ಲ. ಮುಸ್ಲಿಮರ ಆಹಾರ ಪದ್ಧತಿಯನ್ನು ಇತರರು ನಿರ್ಧರಿಸುವ ವ್ಯರ್ಥ ಹೊಣೆಗಾರಿಕೆ ಕೂಡಾ ಇತರರಿಗೆ ಅಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

Join Whatsapp