ಯುಗಾದಿಗೆ ಶುಭಕೋರಿ, ರಂಝಾನ್ ಮರೆತ ಮುಖ್ಯಮಂತ್ರಿ ಬೊಮ್ಮಾಯಿ !

Prasthutha|

►► ಮೋದಿಯ ಯುಗಾದಿ ಶುಭಾಶಯಕ್ಕೆ ರಿಟ್ವೀಟ್ ಮಾಡಿ, ರಂಝಾನ್ ಕಡಗಣಿಸಿದರೇ ಸಿಎಂ ?

- Advertisement -

ಬೆಂಗಳೂರು: ಮುಸ್ಲಿಮರ ಪವಿತ್ರ ತಿಂಗಳಾದ ರಂಝಾನ್ ಉಪವಾಸ ಇಂದಿನಿಂದ ದೇಶಾದ್ಯಂತ ಆರಂಭವಾಗಿದೆ.  ಈವರೆಗೆ ರಂಝಾನ್ ಹಬ್ಬಕ್ಕೆ ಶುಭಾಶಯ ಸಲ್ಲಿಸುವುದು ಜನಪ್ರತಿನಿಧಿಗಳು ಸಂಪ್ರದಾಯವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತನ್ನ ಟ್ವಿಟ್ಟರ್ ಮೂಲಕ ರಂಝಾನ್ ಹಬ್ಬದ ಶುಭಾಶಯ ಕೋರಿದ್ದಾರೆ. ಆದರೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ರಾಜ್ಯದ ಮುಸ್ಲಿಂ ಜನತೆಗೆ ರಂಝಾನ್ ಕುರಿತಾದ ಶುಭಾಶಯಗಳನ್ನು ಕೋರದೆ ಕಡೆಗಣಿಸಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಯುಗಾದಿ ಹಬ್ಬಕ್ಕೆ ಶುಭಕೋರಿರುವ ಬೊಮ್ಮಾಯಿ, ನರೇಂದ್ರ ಮೋದಿ ಶುಭಹಾರೈಸಿರುವ ಯುಗಾದಿ ಹಬ್ಬದ ಟ್ವೀಟ್ ಅನ್ನು ಮುಖ್ಯಮಂತ್ರಿ ಪ್ರತಿ ಟ್ವೀಟ್ ಮಾಡಿದ್ದಾರೆ. ಆದರೆ ಪ್ರಧಾನಿಯ ರಂಝಾನ್ ಶುಭಾಶಯವನ್ನು ರೀ ಟ್ವೀಟ್ ಮಾಡಿಲ್ಲ ಎಂದು ಜಾಲತಾಣದಲ್ಲಿ ನೆಟ್ಟಿಗರು ಕಿಡಿಕಾರಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಎಲ್ಲಾ ಸಮುದಾಯಕ್ಕೂ ಒಳಪಟ್ಟವರು, ಒಂದಕ್ಕೆ ಶುಭಹಾರೈಸಿ, ಇನ್ನೊಂದನ್ನು ಕಡೆಗಣಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

- Advertisement -

ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಮುಸ್ಲಿಮರ ವ್ಯಾಪರ ಬಹಿಷ್ಕಾರ, ಹಲಾಲ್ ಕುರಿತಾಗಿ ಸಂಘಪರಿವಾರ ಸೃಷ್ಟಿಸಿರುವ ಹಲಾಲ್ ವಿವಾದದ ಕುರಿತು ಮುಖ್ಯಮಂತ್ರಿ ಬೊಮ್ಮಾಯಿ ಕಠಿಣ ಕ್ರಮಕೈಗೊಳ್ಳಲು ವಿಫಲರಾಗಿದ್ದರು, ಸಂಘಪರಿವಾರದ ತಾಳಕ್ಕೆ ತಕ್ಕಂತೆ ಮುಖ್ಯಮಂತ್ರಿಯೂ ಕುಣಿಯುತ್ತಿದ್ದಾರೆಯೇ ಎಂಬ ಪ್ರಶ್ನೆಯೂ ಈ ಸಂದರ್ಭ ಉಂಟಾಗಿದೆ.

ಇದೇ ವೇಳೆ ರಂಝಾನ್ ಹಬ್ಬಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕೀಯ ನಾಯಕರು ಶುಭಹಾರೈಸಿದ್ದಾರೆ.

Join Whatsapp